ದೈನಿಕ ಭಾಸ್ಕರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ಮಧ್ಯಪ್ರದೇಶ : ಆದಾಯ ತೆರಿಗೆ ಇಲಾಖೆ ಜುಲೈ 22ರ ಗುರುವಾರ ದೈನಿಕ ಭಾಸ್ಕರ್ ಮಾಧ್ಯಮ ಸಮೂಹದ ಕಚೇರಿಗಳ ಮೇಲೆ ದಾಳಿ ನಡೆಸಿದೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಭೋಪಾಲ್ ಮತ್ತು ಜಬಲ್ಪುರ್ ಸೇರಿದಂತೆ ಮಧ್ಯಪ್ರದೇಶದ ಅನೇಕ ಸ್ಥಳಗಳಲ್ಲಿರುವ ದೈನಿಕ್ ಭಾಸ್ಕರ್ ಪತ್ರಿಕಾ ಕಚೇರಿಗಳು ಮತ್ತು ಗುಂಪಿನ ಪ್ರವರ್ತಕರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಭೋಪಾಲ್ ಮತ್ತು ಇಂದೋರ್ ನಲ್ಲಿರುವ ಮಾಧ್ಯಮ ಸಮೂಹದ ಕಚೇರಿಗಳಲ್ಲಿ ಮತ್ತು ಜೈಪುರ, ರಾಜಸ್ಥಾನ ಮತ್ತು ಅಹಮದಾಬಾದ್, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲೂ ದಾಳಿ ನಡೆಸಲಾಗುತ್ತಿದೆ.
ಇಲಾಖೆ ಅಥವಾ ಅದರ ನೀತಿ ರೂಪಿಸುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈ ದಾಳಿ ನಡೆಸಲಾಗಿದೆ.
ಕೋವಿಡ್-19 ಪರಿಸ್ಥಿತಿಯ ಬಗ್ಗೆ ಸರ್ಕಾರದ ಲೋಪಗಳನ್ನು ಬಹಿರಂಗಪಡಿಸುವ ಅನೇಕ ಲೇಖನಗಳನ್ನು ದೈನಿಕ್ ಭಾಸ್ಕರ್ ಪ್ರಕಟಿಸಿದ ನಂತರ ಮಾಧ್ಯಮ ಗುಂಪಿನ ಮೇಲೆ ಐಟಿ ದಾಳಿ ನಡೆಸಿದೆ ಎಂದು ಅನೇಕ ಪತ್ರಕರ್ತರು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
ದೈನಿಕ್ ಭಾಸ್ಕರ್ ಕಳೆದ ತಿಂಗಳು ಮಧ್ಯಪ್ರದೇಶದ ಕೋವಿಡ್-19 ಪರಿಸ್ಥಿತಿಯ ದುರಾಡಳಿತವನ್ನು ಬಹಿರಂಗಪಡಿಸಿತ್ತು. ಭೋಪಾಲ್ ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಬಗ್ಗೆ ವರದಿ ಮಾಡಿತ್ತು. ಪೆಗಾಸಸ್ ಸ್ನೂಪಿಂಗ್ ಆರೋಪಗಳ ಬಗ್ಗೆ ದೈನಿಕವು ಮುಖಪುಟದಲ್ಲಿ ವಿವರವಾದ ವರದಿ ಪ್ರಕಟಿಸಿತ್ತು. ಉತ್ತರ ಪ್ರದೇಶದ ಗಂಗಾ ನದಿಯ ಉದ್ದಕ್ಕೂ ಸಮಾಧಿಮಾಡಲಾದ ಕೋವಿಡ್-ಸಾವುಗಳು ಮತ್ತು ನದಿಯಲ್ಲಿ ತೇಲುತ್ತಿರುವ ಕೋವಿಡ್ ಹೆಣಗಳ ಬಗ್ಗೆಯೂ ಬರೆದಿತ್ತು. ಈ ಹಿನ್ನೆಲೆಯಲ್ಲಿಯೇ ದಾಳಿ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಾಧ್ಯಮ ಕಚೇರಿ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Latest Indian news

Popular Stories

error: Content is protected !!