ವೈದ್ಯೇತರ ಸಿಬ್ಬಂದಿಗಳಿಗೆ ತರಬೆÉೀತಿ : ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಆಕ್ಷೇಪ

ಮಡಿಕೇರಿ ಮಾ.22 : ರಾಷ್ಟ್ರೀಯ ವೈದ್ಯಕೀಯ ಆಯೋಗದ ರಚನೆಯೊಂದಿಗೆ ವೈದ್ಯಕೀಯ ಕ್ಷೇತ್ರಕ್ಕೆ ಮಾರಕವಾಗುವಂತೆ, ವೈದ್ಯೇತರ ಸಿಬ್ಬಂದಿಗಳಿಗೆ ತರಬೆÉೀತಿ ನೀಡಿ ಗುಡ್ಡ ಗಾಡು.

ಗ್ರಾಮೀಣ ಭಾಗಗಳಿಗೆ ವೈದ್ಯರನ್ನಾಗಿ ನಿಯುಕ್ತಿಗೊಳಿಸಲು ಹಾದಿ ಮಾಡಿಕೊಡುವ ಸೆಕ್ಷನ್‍ಗಳನ್ನು ತೆಗೆದು ಹಾಕಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನ ರಾಜ್ಯಾಧ್ಯಕ್ಷ ಡಾ.ವೆಂಕಟಾಚಲಪತಿ ಆಗ್ರಹಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರವು ಭಾರತೀಯ ವೈದ್ಯ ಪರಿಷ್‍ನ್ನು ರದ್ದು ಪಡಿಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸಿದ್ದು.

ಇದರಲ್ಲಿ ಬಹುತೇಕ ನಾಮನಿರ್ದೇಶಿತ ಸ್ಥಾನಗಳು ಮತ್ತು ವೈದ್ಯೇತರರಿಗೆ ಅವಕಾಶ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇದು ವೈದ್ಯಕೀಯ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಅಭಿಪ್ರಾಯಿಸಿದರು.  

ಕೇಂದ್ರ ಸರ್ಕಾರ ತಂದಿರುವ ಸಮ್ಮಿಶ್ರ ವೈದ್ಯಕೀಯ ಪದ್ದತಿಯಿಂದ ವೈದ್ಯರು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು  ಆರೋಪಿಸಿದ ಅವರು, ಇಂತಹ ಮಿಶ್ರ ವೈದ್ಯಕೀಯ ಪದ್ಧತಿಗಳು ಬೇಡ.

ಎಲ್ಲಾ ವಿವಿಧ ವೈದ್ಯ ಪದ್ಧತಿಗಳ ಶುದ್ಧಿಯೇ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಗುರಿಯಾಗಿದೆ. ಎಲ್ಲಾ ಔಷಧ ಪದ್ಧತಿಯ ವೈದ್ಯರು ಬೇರೆ ಬೇರೆಯಾಗಿ ಗುರುತಿಸಲ್ಪಡಬೇಕು.

ಅಲೋಪತಿಗಾಗಿ ‘ಡಾಕ್ಟರ್’, ಆಯುರ್ವೇದಕ್ಕೆ ‘ವೈದ್ಯ’, ಯುನಾನಿಗಾಗಿ ‘ಹಕೀಂ’, ಹೋಮಿಯೋಪತಿಗಾಗಿ ‘ಹೋಮಿಯೋ’ ಮುಂತಾದ ನಿರ್ದಿಷ್ಟ ಹೆಸರುಗಳನ್ನು ಬಳಸಿದಲ್ಲಿ, ಚಿಕಿತ್ಸೆ ಪಡೆಯುವವರು ತಾವು ಯಾವ ಪದ್ಧತಿಯ ಚಿಕಿತ್ಸೆ .

ಪಡೆದುಕೊಳ್ಳುತ್ತಿದ್ದೇವೆ ಎನ್ನುವ ಬಗ್ಗೆ ಸ್ಪಷ್ಟತೆಯನ್ನು ಹೊಂದಲು ಸಾಧ್ಯವೆಂದು ತಿಳಿಸಿದರು.


ಆಯುರ್ವೇದ ಶಸ್ತ್ರ ಚಿಕಿತ್ಸೆಗೆ ಅವಕಾಶ- ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಇತ್ತೀಚಿನ ಆದೇಶದಲ್ಲಿ ಶಲ್ಯತಂತ್ರದ ಆಯುರ್ವೇದ ಸ್ನಾತಕೋತ್ತರ ಕೋರ್ಸ್‍ಗಳಿಗೆ ಎಂಎಸ್(ಜನರಲ್ ಸರ್ಜರಿ) ಎಂಬ ನಾಮಾಂಕಿತವನ್ನೂ ನೀಡಿದೆ.

ಇದು ಆಘಾತಕಾರಿ ವಿಚಾರವೆಂದು ಆತಂಕ ವ್ಯಕ್ತಪಡಿಸಿದ ಅವರು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಶಸ್ತ್ರ ಚಿಕಿತ್ಸೆಗಳಿಲ್ಲ ಮತ್ತು ಆ ವೈದ್ಯ ಪದ್ಧತಿಯಲ್ಲಿ ಆ್ಯಂಟಿಬಯಾಟಿಕ್ ಬಳಕೆ ಇಲ್ಲದಿರುವುದರತ್ತ ಬೊಟ್ಟು ಮಾಡಿದರು.


ನಕಲಿ ವೈದ್ಯರ ಹಾವಳಿ-ಅಧಿಕೃತ ಅಧ್ಯಯನದ ಪ್ರಕಾರ ದೇಶದಲ್ಲಿ ನೋಂದಾಯಿಸದ ಅನರ್ಹ ವೈದ್ಯರು ಒಂದು ಮಿಲಿಯನಷ್ಟಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಪದವಿ ಪಡೆದ ವೈದ್ಯರಿಗೆ ಲಗಾಮು ಹಾಕಲು ಕಾನೂನುಗಳಿದೆ. ಆದರೆ ಯಾವುದೇ ಅರ್ಹ ಪದವಿ ಇಲ್ಲದೆ ಇರುವ ನಕಲಿ ವೈದ್ಯರುಗಳಿಗೆ ಯಾವುದೇ ಕಾಯಿದೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು.

ನಕಲಿ ವೈದ್ಯರ ಹಾವಳಿ ತಡೆಗಟ್ಟುವಲ್ಲಿ ಕಾನೂನು ತರುವತ್ತ ಸರಕಾರ ಕಾರ್ಯಪ್ರವೃತ್ತರಾಗಬೇಕು ಎಂದರು.


ಇತ್ತೀಚಿನ ದಿನಗಳಲ್ಲಿ  ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳ ಮೇಲೆ ದೌರ್ಜನ್ಯಗಳು ಹಾಗೂ ಹಲ್ಲೆಗಳು ಹೆಚ್ಚಾಗುತ್ತಿದ್ದು.

ಸರ್ಕಾರ ಕೂಡಲೇ ನ್ಯಾಯಾಲಯಗಳನ್ನು ನಿರ್ಮಿಸುವುದರ ಜೊತೆಗೆ ವೈದ್ಯರ ರಕ್ಷಣಾ ಕಾನೂನನ್ನು ಜಾರಿಗೆ ತರಬೇಕು.

ಗ್ರಾಹಕ ರಕ್ಷಣಾ ಕಾನೂನಿನಡಿಯಲ್ಲಿ ವೈದ್ಯರು ನೀಡಬೇಕಾದ ಅವೈಜ್ಞಾನಿಕ ಪರಿಹಾರ ಧನಕ್ಕೆ ಮಿತಿ ಹೇರಬೇಕೆಂದು ಒತ್ತಾಯಿಸಿದರು.

ಟ್ರೇಡ್ ಲೈಸನ್ಸ್ ಹಾಗೂ ಅಗ್ನಿ ಶಾಮಕ ವಿಭಾಗದಿಂದ ತರಬೇಕಾದ ನಿರಪೇಕ್ಷಣಾ ಪತ್ರ ಇವೆರಡನ್ನೂ ಪಡೆಯುವುದು ಅತ್ಯಂತ ದುಸ್ತರವಾಗಿದ್ದು, ತಾಲೂಕು ಮತ್ತು ನಗರಗಳಲ್ಲಿ ಇರುವ ಕಡಿಮೆ ದÀರದಲ್ಲಿ.

ಅತ್ಯುತ್ತಮ ವೈದ್ಯಸೇವೆ ಸಲ್ಲಿಸುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಿಗೆ ಇದರಿಂದ ಸಂಕಷ್ಟಗಳು ಎದುರಾಗಿವೆ.

ಈ ನಿಟ್ಟಿನಲ್ಲಿ ಸರ್ಕಾರ  ಕಾನೂನನ್ನು ಸರಳೀಕರಣಗೊಳಿಸಬೇಕು ಮತ್ತು  ಏಕಗವಾಕ್ಷಿ ಮೂಲಕ ಆಸ್ಪತ್ರೆಗಳ ನೋಂದಣಿ  ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಐಎಂಎ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಡಾ. ಜಿ.ಕೆ.ಭಟ್, ಕೊಡಗು ಜಿಲ್ಲಾಧ್ಯಕ್ಷ ಡಾ.

ಶ್ಯಾಂ ಅಪ್ಪಣ್ಣ, ಕಾರ್ಯದರ್ಶಿ ಡಾ. ಪ್ರಶಾಂತ್ ಹಾಗೂ ನಿಕಟ ಪೂರ್ವ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಉಪಸ್ಥಿತರಿದ್ದರು. ಫೋಟೋ :: ಮೆಡಿಕಲ್

Latest Indian news

Popular Stories