ಸ್ವಿಸ್ ಬ್ಯಾಂಕ್ ಹಣದ ಬಗ್ಗೆ ಆಗಾಗಾ ರಾಜಕಾರಣಿಗಳು ಮಾತನಾಡುವುದು ನಮ್ಮ ದೇಶದಲ್ಲಿ ಮಾಮೂಲು. ಅಲ್ಲಿರುವ ಕಪ್ಪು ಹಣ ತರುತ್ತೇವೆ, ಬಡವರಿಗೆ ಹಂಚುತ್ತೇವೆ ಎನ್ನುವುದು ಇವು ಯಾವುದು ಕೂಡಾ ಕಾರ್ಯರೂಪಕ್ಕೆ ಬಂದಿಲ್ಲವಾದರೂ ಈಗ ಸ್ವಿಜರ್ಲೆಂಡಿನ ಕೇಂದ್ರೀಯ ಬ್ಯಾಂಕ್ ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಭಾರತಿಯರು ಸ್ವಿಸ್ ಬ್ಯಾಂಕಿನ್ನಲ್ಲಿ ಇಟ್ಟಿರುವ ಹಣದ ಮೊತ್ತ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ತಿಳಿಸಿದೆ.
ಹೌದು, ಭಾರತೀಯರು ಸ್ವಿಸ್ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿದ ಹಣದ ಮೊತ್ತ 20,700 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಭಾರತೀಯರು ವೈಯಕ್ತಿಕವಾಗಿ ಮತ್ತು ಸಂಸ್ಥೆಗಳ ಮೂಲಕ ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟಿರುವ ಹಣದ ಮೊತ್ತ 20,700 ಕೋಟಿ ರೂಗೆ ಏರಿಕೆಯಾಗಿದೆ. ಇದರಲ್ಲಿ ಭಾರತದಲ್ಲಿನ ಸ್ವಿಜರ್ಲೆಂಡಿನ ಮೂಲದ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಭಾರತೀಯರ ಹಣವೂ ಸೇರಿದೆ ಎಂದು ಅಲ್ಲಿನ ಕೇಂದ್ರೀಯ ಬ್ಯಾಂಕ್ ಮಾಹಿತಿ ಹಂಚಿಕೊಂಡಿದೆ.
ಸೆಕ್ಯೂರಿಟಿ ಹಣ ಮತ್ತು ಇತರ ಮಾದರಿಯ ಹೂಡಿಕೆಗಳಲ್ಲಿನ ಏರಿಕೆಯಿಂದಾಗಿ ಒಟ್ಟಾರೆ ಮೊತ್ತದಲ್ಲಿ ಏರಿಕೆಯಾಗಿದೆ. ಭಾರತೀಯರು ಸ್ವಿಸ್ ಬ್ಯಾಂಕಿನ್ನಲ್ಲಿರುವ ಹಣ ಕಳೆದ ಹದಿಮೂರು ವರ್ಷಗಳಿಂದ ಇದೇ ಮೊದಲು ಇಷ್ಟೊಂದು ಗರಿಷ್ಟ ಮಟ್ಟದಲ್ಲಿ ಏರಿಕೆ ಆಗಿರುವುದು ಎನ್ನಲಾಗಿದೆ.
೨೦೦೬ರಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತದ ಗರಿಷ್ಟ ಹಣ ಪತ್ತೆಯಾಗಿತ್ತು. ಆಗ 23000 ಕೋಟಿ ರೂ ಹಣ ಪತ್ತೆಯಾಗಿತ್ತು. ಆದರೆ ನಂತರದ ಬಹುತೇಕ ವರ್ಷಗಳಲ್ಲೆ ಅದು ಇಳಿಕೆಯ ಹಾದಿಯಲ್ಲಿತ್ತು. 2019 ರಲ್ಲಿ ಹೀಗೆ ಇಡಲಾಗಿದ್ದ ಹಣದ ಮೊತ್ತ 6625ಕೋಟಿ ರೂ ಆಗಿತ್ತು. ಆದರೆ ಇದೀಗ ಬಿಡುಗಡೆ ಮಾಡಿರುವ ಅಂಕಿಅಂಶ ಹಲವರ ಅಚ್ಚರಿಗೆ ಕಾರಣವಾಗಿದೆ.
ಸ್ವಿಸ್ ಬ್ಯಾಂಕುಗಳೆಂದರೆ ಭಾರತೀಯರ ಪಾಲಿಗೆ ಅದೇನೋ ನಿಗೂಢತೆ. ಹಾಗಾಗೀ ಅಲ್ಲಿ ಇಟ್ಟ ಸಿರಿವಂತರ ಹಣವನ್ನು ಕಪ್ಪು ಹಣ ಎಂದು ಕರೆಯುತ್ತಿದ್ದರು. ಈಗಲೂ ಕರೆಯುವುದು ಇದೆ. ಆದರೆ ಈಗ ಸ್ವಿಸ್ ಬ್ಯಾಂಕ್ ಗಳು ವಿದೇಶಿಯರು ತಮ್ಮಲ್ಲಿ ಇಟ್ಟ ಎಲ್ಲಾ ರೀತಿಯ ಹಣದ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವುದರಿಂದ ಕಪ್ಪು ಹಣ ಇಡುತ್ತಿದ್ದವರಿಗೆ ನಡುಕ ಶುರುವಾಗಿ ಹೆಚ್ಚು ಹಣ ಇಲ್ಲಿ ಈಗ ಇಡುತ್ತಿಲ್ಲವಂತೆ.