ಇದೊಂದು ಆಕಸ್ಮಿಕ ಘಟನೆ; ಆತ್ಮಹತ್ಯೆಗೆ ಯತ್ನಿಸುವಂತಹ ವ್ಯಕ್ತಿಯೂ ನಾನಲ್ಲ- ಎನ್.ಆರ್. ಸಂತೋಷ್

ಬೆಂಗಳೂರು, ನ.30 (ಯುಎನ್‍ಐ):- ನಿದ್ದೆ ಮಾತ್ರೆ ಸೇರಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರು ಸೋಮವಾರ ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ಸಂಬಂಧಿಕರ ಮದುವೆಯೊಂದರಲ್ಲಿ ಭಾಗಿಯಾಗಿದ್ದು, ಊಟದಲ್ಲಿ ಅಜೀರ್ಣವಾಗಿತ್ತು. ಹೀಗಾಗಿ ಮಾತ್ರೆ ನುಂಗಿದ್ದು, ಡೋಸ್ ಹೆಚ್ಚಾಗಿದೆ ಅಷ್ಟೇ. ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನನಗೆ ಯಾವುದೇ ರೀತಿಯಲ್ಲಿ ಒತ್ತಡವಿರಲಿಲ್ಲ. ರಾಜಕೀಯ ಒತ್ತಡ ಯಾವಾಗಲೂ ಇರುತ್ತದೆ. ಆದರೆ, ಆತ್ಮಹತ್ಯೆಗೆ ಯತ್ನಿಸುವಂತಹ ವ್ಯಕ್ತಿಯೂ ನಾನಲ್ಲ ಎಂದರು.

Latest Indian news

Popular Stories