ಕಾಪು:ಮಧ್ಯರಾತ್ರಿ ಸ್ಕೂಟರ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ರಸ್ತೆಯಲ್ಲಿ ಮಲಗಿಸಿ ಸ್ಕೂಟರ್ ಸಮೇತ ಸ್ವತ್ತು ಕಳವು!

ಕಾಪು: ವಿಚಿತ್ರ ಘಟನೆಯೊಂದರಲ್ಲಿ ಮಧ್ಯರಾತ್ರಿ‌ ಸ್ಕೂಟರ್’ನ ಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದ ವ್ಯಕ್ತಿಯನ್ನು ಹೆಲ್ಮೆಟ್ ಸಮೇತ ರಸ್ತೆಯಲ್ಲಿ ಮಲಗಿಸಿ ಸ್ಕೂಟರ್ ಕದ್ದ ಕುರಿತು ವರದಿಯಾಗಿದೆ.

ಕಾರ್ಕಳ ಮೂಲದ ಚೇತನ್‌ (34) ಇವರು ಫೆ 11 ರಂದು ರಾತ್ರಿ ಸುರತ್ಕಲ್‌ಗೆ ಹೋಗಲು ಸ್ಕೂಟರಿನಲ್ಲಿ ಹೊರಟಿದ್ದಾರೆ. ಸ್ಕೂಟರ್‌ನಲ್ಲಿ ರಾಹೆ 66ರಲ್ಲಿ ಹೋಗುತ್ತಾ ರಾತ್ರಿ 12:00 ಗಂಟೆ ಸಮಯಕ್ಕೆ ಕೊಪ್ಪಲಂಗಡಿ ದರ್ಗಾದ ಬಳಿ ತಲುಪುತ್ತಿದ್ದಂತೆ ಸ್ಕೂಟರ್‌ ಸವಾರಿ ಮಾಡಲು ಕಷ್ಟವಾದ ಕಾರಣ ತನ್ನ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರಿನ ಮುಂಭಾಗಕ್ಕೆ ತಲೆ ಇಟ್ಟು ಮಲಗಿದ್ದು ನಂತರ ಬೆಳಿಗ್ಗೆ 2:30 ಗಂಟೆಗೆ ಎಚ್ಚರವಾದಾಗ ಹೆಲ್ಮೆಟ್‌ ಸಮೇತ ರಸ್ತೆ ಬದಿ ಮಲಗಿರುವುದು ಕಂಡು ಬಂದಿದೆ.

ಅವರ ಸ್ಕೂಟರ್‌, ಮೊಬೈಲ್‌, ಪರ್ಸ್‌ನ್ನು ಕಳ್ಳರು ಎಗರಿಸಿಕೊಂಡು ಹೋಗಿದ್ದಾರೆ.ಸ್ಕೂಟರ್‌, ಮೊಬೈಲ್‌, ಹಾಗೂ ಪರ್ಸ ಹಾಗೂ ಪರ್ಸ್‌ನಲ್ಲಿದ್ದ ವೋಟರ್‌ ಐಡಿ, ಡಿಎಲ್‌, ಸ್ಕೂಟರ್‌ನ ŖC AŢM PAN CAŖD ಹಾಗೂ ಸ್ಕೂಟರ್‌ನ ಡಿಕ್ಕಿಯಲ್ಲಿದ್ದ Tools ಗಳು ಮತ್ತು ಆಧಾರ್‌ ಕಾರ್ಡ್‌ ಗಳನ್ನು  ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸ್ಕೂಟರ್‌ KA20 EW 3016 ನೇ ಟಿವಿಎಸ್‌ ಎನ್‌ ಪಾರ್ಕ್‌ ಆಗಿದೆ. ಇದರ ಅಂದಾಜು ಮೌಲ್ಯ 30,000/- ರೂ ಆಗಿರುತ್ತದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2024 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

Latest Indian news

Popular Stories