ಕಾರ್ಕಳ: ಷೇರು ಮಾರುಕಟ್ಟೆಯ ಹೆಸರಿನಲ್ಲಿ ಯುವಕನೊರ್ವನಿಗೆ ಆನ್ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.
ಶಿವಪ್ರಸಾದ್ (26) ಕಾರ್ಕಳ ಇವರಿಗೆ ದಿನಾಂಕ 29-11-2023 ರಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಕುರಿತು ಮಂಜಿತ್ ಸಿಂಘ್ ಎಂಬ ವ್ಯಕ್ತಿ ಪ್ಯಾಂತನ್ ವೆಂಚರ್ಸ್ ಎಂಬ ಸಂಸ್ಥೆಯು ಭಾರತದಲ್ಲಿ ಹೂಡಿಕೆ ಪ್ರಾರಂಭಿಸಿದೆ ಎಂಬುದಾಗಿ ಇವರ ಮೊಬೈಲ್ ಗೆ ಸಂದೇಶ ಕಳುಹಿಸಿದ್ದಾನೆ.
ಅವರು ಕಳುಹಿಸಿದ ಲಿಂಕ್‌ಗೆ ಸೇರಿದ ಶಿವಪ್ರಸಾದ್ ಆ ಲಿಂಕ್‌ನಲ್ಲಿ ಷೇರು ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ನಂತರ ಆರೋಪಿ ಬೇರೆ ಆಪ್ ಡೌನ್ ಲೋಡ್ ಮಾಡಲು ತಿಳಿಸಿದ್ದು ಅವರು ಕಳುಹಿಸಿದ ಲಿಂಕ್ http;//pt-vc.cc/link ಮೂಲಕ ಆಪ್ ಡೌನ್ ಲೋಡ್ ಮಾಡಿದ್ದಾರೆ.
ಹಂತಹಂತವಾಗಿ ರೂ 7,35,827.80 ಹಣವನ್ನು ತನ್ನ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದು ನಂತರ ವಾಟ್ಸಾಪ್ ಗ್ರೂಪ್‌ನಿಂದ ತೆಗೆದುಹಾಕಿದ್ದಾನೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 28/2024 ಕಲಂ:66 ಐಟಿ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.