ಮಡಿಕೇರಿ ಡಿ.1 : ಚೆಯ್ಯಂಡಾಣೆಯ ಪುಲಿಮಕ್ಕಿಯಲ್ಲಿ ಚೆರುವಾಳಂಡ ಕುಟುಂಬಸ್ಥರು ಕೊಡಗಿನ ಸಾಂಪ್ರದಾಯಿಕ ಹಬ್ಬ ಪುತ್ತರಿಯನ್ನು ಸಂಭ್ರಮದಿಂದ ಆಚರಿಸಿದರು.
ಚೆರುವಾಳಂಡ ಕುಟುಂಬದ ಐನ್‍ಮನೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಧಾನ್ಯಲಕ್ಷ್ಮಿಯನ್ನು ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಂಡರು. ನಂತರ ವಿಶೇಷ ಪೂಜೆ ಸಲ್ಲಿಸಿ ನೆರದಿದ್ದವರಿಗೆ ಕದಿರು ವಿತರಣೆ ಮಾಡಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ಚೆರುವಾಳಂಡ ಕುಟುಂಬದ ಪಟ್ಟೆದಾರ ಸಿ.ಎಂ.ಮುತ್ತಣ್ಣ ಮಾತನಾಡಿ ಕೊಡಗಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪುತ್ತರಿ ಹಬ್ಬ ಮಹತ್ವಪೂರ್ಣ ಆಚರಣೆಯಾಗಿದ್ದು, ಯುವ ಸಮೂಹ ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಕುಟುಂಬಸ್ಥರಾದ ಸಿ.ಎಂ.ಸೋಮಯ್ಯ, ಸಿ.ಎಂ.ರಾಕೇಶ್, ಅಯ್ಯಪ್ಪ, ಮುದ್ದಪ್ಪ, ಕಾವೇರಪ್ಪ, ನಾಣಯ್ಯ, ದೊರೆ, ರಮೇಶ್, ಶಿವಪ್ಪ, ಗಣಪತಿ, ತಮ್ಮಯ್ಯ, ಸಚಿನ್, ಕುಶಾಲಪ್ಪ, ಚಂದನ್, ಭೀಮಯ್ಯ, ಸುಬ್ಬಯ್ಯ, ಡ್ಯಾನಿ, ಪೊನ್ನಪ್ಪ, ಸೋಮಣ್ಣ, ಪುನೀತ್, ನಿಶಾಂಕ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಹಾಜರಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.