ಕೊಡಗು: ಕೋಪಟ್ಟಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಭತ್ತದ ಫಸಲು ನಾಶ

ಮಡಿಕೇರಿ ಡಿ.9 : ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಭತ್ತದ ಫಸಲು ನಾಶವಾಗಿರುವ ಘಟನೆ ಭಾಗಮಂಡಲ ಸಮೀಪದ ಕೋಪಟ್ಟಿ ಗ್ರಾಮದಲ್ಲಿ ನಡೆದಿದೆ.
ಸುಮಾರು ಎಂಟು ಕಾಡಾನೆಗಳು ಪೊಡನೋಲನ ಸುಧಿ ಎಂಬುವವರ ಗದ್ದೆಗೆ ಲಗ್ಗೆ ಇಟ್ಟು 70 ಬಟ್ಟಿಯಷ್ಟು ಭತದ ಫಸಲನ್ನು ತಿಂದು ತೇಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Latest Indian news

Popular Stories