ಕೊಡಗು: ಶ್ರದ್ಧಾಭಕ್ತಿಯಿಂದ ಜರುಗಿದ ಬೆಟ್ಪತ್ತೂರು ಮಾದೂರಪ್ಪ ಉತ್ಸವ

ಮಡಿಕೇರಿ ಡಿ. 16 : ಬೆಟ್ಟತ್ತೂರಿನ ಶ್ರೀ ಮಾದೂರಪ್ಪ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಮಧ್ಯಾಹ್ನ ಊರಿನ ಸಂಪ್ರದಾಯದಂತೆ ಕೊಂಪುಳೀರ ಮನೆಯಿಂದ ದೇವರ ಬಂಡಾರವನ್ನು ಎತ್ತುಗಳು, ದುಡಿಕೊಟ್ಟು, ಮೂಲಕ ದೇವಾಲಯಕ್ಕೆ ತಂದು ಮಾದೂರಪ್ಪನ ಸನ್ನಿಧಿಯಲ್ಲಿ ಪ್ರದಕ್ಷಿಣೆ ಹಾಕಿ ದೇವರಿಗೆ ಪೂಜೆ ಸಲ್ಲಿಸಲಾಗಯಿತು. ನಂತರ ಹೊಸ ಅಕ್ಕಿಯಿಂದ ತಯಾರಿಸಿ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ನಂತರ ನೆರೆದಿದ್ದ ಭಕ್ತಾಧಿಗಳಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ದೇವರ ಹಾರ ಹಾಕಿ ಗೌರವಿಸಲಾಯಿತು.
ಸಂಜೆ ಅಜ್ಜಪ್ಪ ದೇವರಿಗೆ ಎಡೆ ಇಟ್ಟು, ಫಲಹಾರ ಸೇವಿಸಿ ಬಂಡಾರವನ್ನು ಮೂಲ ಜಾಗದಲ್ಲೇ ಇಡಲಾಗುತ್ತದೆ.

Latest Indian news

Popular Stories