ಕುಂದಾಪುರ: ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಯ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವಿದ್ಯಾರ್ಥಿ ಸುಪ್ರಜ ಶೆಟ್ಟಿ (17) ರವರು ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮುಂದಿನ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ತೆರಳಲು ತಯಾರಿ ನಡೆಸಿಕೊಂಡಿದ್ದರು.
ಸೆಪ್ಟೆಂಬರ್ 4 ರಂದು ಬೆಳಿಗ್ಗೆ 9 ಗಂಟೆಗೆ ಮನೆಯಲ್ಲಿ ತಿಂಡಿ ತಿಂದು ತೋಟದ ಕಡೆಗೆ ಹೋಗಿದ್ದರು. ನಂತರ ಮನೆಗೆ ಬಾರದಿದ್ದಾಗ ಮನೆಯವರು ಆತನನ್ನು ಹುಡುಕುತ್ತಾ ಮನೆಗೆ ಬಾರದೆ ಇದ್ದದ್ದನ್ನು ಕಂಡು ಈ ಬಗ್ಗೆ ಠಾಣಾ ಅಕ್ರ ಅ.ಕ್ರ: 69/ 2024, ಕಲಂ: 137(2) BNS. ರಂತೆ ಪ್ರಕರಣ ದಾಖಲಿಸಿದ್ದರು.
ಕಾಣೆಯಾದ ಸುಪ್ರಜ ಶೆಟ್ಟಿ ಪ್ರಾಯ 17 ವರ್ಷ ರವರು ಧರಿಸುತ್ತಿದ್ದ ಚಪ್ಪಲಿ ಮನೆಯ ಬಳಿಯಿರುವ ತೋಟದ ಹೊಳೆಯ ಬದಿಯ ದಡದಲ್ಲಿ ಇದ್ದದನ್ನು ಕಂಡು ಹೊಳೆಯ ನೀರಿನಲ್ಲಿ ಸ್ಥಳೀಯರು ಹಾಗೂ ಮುಳುಗು ತಜ್ಞರ ಸಹಾಯದಿಂದ ಹುಡುಕಾಡಿದಲ್ಲಿ ಸುಪ್ರಜ ಶೆಟ್ಟಿ ಮೃತ ಶರೀರವು ಸೆಪ್ಟೆಂಬರ್ 5 ರಂದು ಬೆಳಿಗ್ಗೆ 6 ಗಂಟೆ ಸಮಯಕ್ಕೆ ಹೊಳೆಯ ದಡದಲ್ಲಿ ಸಿಕ್ಕಿದ್ದು ಉನ್ನತ ವ್ಯಾಸಾಂಗದ ಬಗ್ಗೆ ದೂರದ ಊರಿಗೆ ಹೋಗುವ ವಿಚಾರಕ್ಕೆ ಮನನೊಂದು ಅಥವಾ ಬೇರೆ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಹೊಳೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯು ಡಿ ಆರ್ ನಂಬ್ರ: 30/2024 ಕಲಂ : 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.