ಕುಂದಾಪುರ: ಆನ್ಲೈನ್ ಮೋಸ – ಎಂಟು‌ ಲಕ್ಷ ಕಳೆದು ಕೊಂಡ ಯುವತಿ!

ಕುಂದಾಪುರ: ಯುವತಿಯೊಬ್ಬಳು ಆನ್ಲೈನ್ ವಂಚನೆಗೆ ಗುರಿಯಾಗಿ ಬರೋಬ್ಬರಿ ಎಂಟು ಲಕ್ಷ ರೂಪಾಯಿ ಕಳೆದುಕೊಂಡ ಕುರಿತು ಪ್ರಕರಣ ದಾಖಲಾಗಿದೆ.

ಅಕ್ಷತಾ(26) ಎಂಬುವವರಿಗೆ ರವರಿಗೆ ದಿನಾಂಕ 14/01/2024 ರಂದು ಮೊಬೈಲ್‌ ಗೆ ವಾಟ್ಸ್‌ ಆಪ್‌ ಮೆಸೇಜ್‌ ಬಂದಿದ್ದು, ಅದರಲ್ಲಿ ಅಪರಿಚಿತ ವ್ಯಕ್ತಿಯು ಕೆಲವು ಲಿಂಕ್‌ಗಳನ್ನು ಕಳುಹಿಸಿ ಈ ವೀಡಿಯೋವನ್ನು ಲೈಕ್‌ ಮಾಡಿ ಟಾಸ್ಕ್‌ ಮಾಡಿ ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ತಿಳಿಸಿದ್ದಾನೆ.

ನಂತರದಲ್ಲಿ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಅಪ್ಲಿಕೇಶನ್‌ ನಲ್ಲಿ ಸಂಪರ್ಕಿಸಿ ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ನಂಬಿಸಿದ್ದು, ಅದರಂತೆ ಆ ವ್ಯಕ್ತಿಯು ತಿಳಿಸಿದ ಬ್ಯಾಂಕ್‌ ಅಕೌಂಟ್‌ ಗೆ ಒಟ್ಟು ರೂಪಾಯಿ 8,00,000/- ಹಣವನ್ನು ಆನ್‌ ಲೈನ್‌ ಮುಖಾಂತರ ವರ್ಗಾವಣೆ ಮಾಡಿದ್ದಾರೆ.

ಆದರೆ ಆರೋಪಿಗಳು ಲಾಭಾಂಶವನ್ನು ನೀಡದೇ, ಹಾಗೂ ಪಿರ್ಯಾದಿದಾರರಿಂದ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2024 ಕಲಂ: 420 ಐಪಿಸಿ ಮತ್ತು ಕಲಂ: 66(C), 66 (D) I T Act ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories