ಕುಂದಾಪುರ: ಯಾರೂ ಇಲ್ಲದೆ ಇದ್ದ ಸಮಯ ಮನೆಗೆ ನುಗ್ಗಿ ಮನೆ ಖಾಲಿಯಾಗುವಂತೆ ಕಳ್ಳತನ!

ಕುಂದಾಪುರ: ಕಳ್ಳರು ಕಳ್ಳತನ ಮಾಡುವಾಗ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಮನೆ ಗುಡಿಸಿ ಗುಂಡಾಂತರ ಮಾಡಿದ್ದಾರೆ.

ರಾಗಿಣಿ (70), ಇಂಡಸ್ಟ್ರಿಯಲ್‌ ಏರಿಯಾ, ಕಾರ್ಕಳ ಇವರ ತಾಯಿಯ ಕೋಟೇಶ್ವರದ ಕಲ್ಪವನ ಮನೆಯಲ್ಲಿ 2 ವರ್ಷಗಳಿಂದ ಯಾರೂ ವಾಸವಿಲ್ಲದೇ ಇದ್ದು 2-3 ತಿಂಗಳಿಗೊಮ್ಮೆ ಬಂದು ನೋಡಿಕೊಂಡು ಹೋಗುತ್ತಿದ್ದರಯ.

ಜುಲೈ 8 ರಂದು 10:30 ಗಂಟೆಗೆ ಅವರ ತಾಯಿಯ ಮನೆಗೆ ಭೇಟಿ ನೀಡಿ ಮನೆಯನ್ನು ನೋಡಿದಾಗ ಮನೆಯ ಹಿಂಬದಿಯ ಕಿಟಕಿಯನ್ನು ಕಿತ್ತು ಹಾಕಿರುವುದು ಕಂಡುಬಂದಿದ್ದು ಮನೆಯ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿದ್ದ 10 ಗ್ರಾಂ ತೂಕದ ನಾಗದೇವರ ಚಿನ್ನದ ಕವಚ , ನಗದು 2000/- ರೂಪಾಯಿ ಗ್ಯಾಸ್‌ ಒಲೆ-1, ಸ್ಟೀಲ್‌ ಡ್ರಮ್-1‌, ಸ್ಟೀಲ್‌ ಬಕೇಟ್-4‌, ಊಟದ ಸ್ಟೀಲ್‌ ತಟ್ಟೆಗಳು-10, ಅಲ್ಯೂಮಿನಿಯಂ ಬಕೆಟ್-2, ಮಿಕ್ಸರ್-1‌, ಕುಕ್ಕರ್-2‌, ತಾಮ್ರದ ಬಾಣಲೆ-1, ಅನ್ನದ ಸ್ಟೀಲ್‌ ಕಟಾರಾ-3, ಅಲ್ಯೂಮಿನಿಯಂ ಡಬ್ಬ-3, ತಾಮ್ರದ ಚೊಂಬುಗಳು-4, ಕಾಲು ದೀಪಗಳು-2, ದೊಡ್ಡ ತಾಮ್ರದ ಕೊಡಪಾನ-1, ಹಿತ್ತಾಳೆ ಹರಿವಾಣ-4, 80 ಲೀಟರ್‌ ಗಾತ್ರದ ತಾಮ್ರದ ಹಂಡೆ -1 ಇಲ್ಲದೇ ಇದ್ದು ಯಾರೋ ಕಳ್ಳರು ದಿನಾಂಕ 26/05/2024 ರಿಂದ ದಿನಾಂಕ 08/07/2024 ರಂದು 10:30 ಗಂಟೆಯ ಮದ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರಬಹುದಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2024 ಕಲಂ: 331 (3), 331 (4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories