ಮಲ್ಪೆ: ಯುವತಿಗೆ ಆನ್ಲೈನ್’ನಲ್ಲಿ 14 ಲಕ್ಷ ವಂಚನೆ

ಮಲ್ಪೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ 14.30 ಲಕ್ಷ ವಂಚಿಸಿದ್ದಾರೆ.

ಸಿದ್ರಾತುಲ್‌ ಮುಂತಾಜಿ (29) ಎಂಬ ಯುವತಿ ಇದಿನಾಂಕ 10/12/2023 ರಂದು invesco stock trading learning ಎಂಬ ವಾಟ್ಸ್‌ ಅಪ್‌ ಗ್ರೂಪ್‌ನಲ್ಲಿ ಸೇರಿದ್ದು, ಗ್ರೂಪ್‌ ನಲ್ಲಿ ಸ್ಟಾಕ್‌ ಮಾರ್ಕೇಟಿಂಗ್‌ ಬಗ್ಗೆ ತಿಳಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸಿದ್ದಾರೆ.

ಅದರಂತೆ vip.invesco-ac.com ವೆಬ್ ಸೈಟ್‌ ಮೂಲಕ ಐಡಿಯನ್ನು ಕ್ರಿಯೇಟ್ ಮಾಡಿ ಹಣ ಹೂಡಿಕೆ ಮಾಡಲು ತಿಳಿಸಿದಂತೆ ದಿನಾಂಕ 10/01/2024 ದಿಂದ ದಿನಾಂಕ ದಿನಾಂಕ 25/01/2024 ರಂದು ರವರೆಗೆ ಒಟ್ಟು ರೂಪಾಯಿ 15,90,000/- ಹೂಡಿಕೆ ಮಾಡಿದ್ದು, ರೂಪಾಯಿ 1,20,000/- ಹೂಡಿಕೆ ಮಾಡಿದ ಹಣವನ್ನು ವಾಪಾಸ್ಸು ತೆಗೆದುಕೊಂಡಿರುತ್ತಾರೆ.

ಬಳಿಕ ಹೂಡಿಕೆ ಮಾಡಿದ ರೂಪಾಯಿ 14,30,000/- ಹಣದ ಲಾಭಾಂಶವನ್ನು ಕೊಡದೇ ಇನ್ನೂ ಹೂಡಿಕೆ ಮಾಡಿ ಎಂದು ಪ್ರೇರೆಸುತ್ತಿದ್ದು, ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲು ಅಥವಾ ಲಾಭಾಂಶವನ್ನು ನಿಡದೇ ನಂಬಿಸಿ ಮೊಸ ಮಾಡಲಾಗಿದೆ.

ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2024 ಕಲಂ : 66(D) ಐ.ಟಿ. ಕಾಯ್ದೆ ಮತ್ತು ಕಲಂ : 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories