ಮಲ್ಪೆ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಡಿದು ಎಂಟುಅಡಿ ಆಳದ ಖಾಲಿ ಪ್ರದೇಶಕ್ಕೆ ನೀರಿನ ಟ್ಯಾಂಕರ್ ಬಿದ್ದು ಕ್ಲಿನರ್ ಮೃತಪಟ್ಟ ಕುರಿತು ವರದಿಯಾಗಿದೆ.
ನೀರಿನ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 8 ಅಡಿ ಆಳ ಇರುವ ಖಾಲಿ ಜಾಗದಲ್ಲಿ ಟ್ಯಾಂಕರ್ ನ ಬಿದ್ದಿದೆ. ಕ್ಲೀನರ್ ಜನಾರ್ಧನ್ ರವರು ಟ್ಯಾಂಕರ್ನ ಅಡಿಯಲ್ಲಿ ಸಿಲುಕಿದ್ದು ನಂತರ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವ ಕುರಿತು ತಿಳಿಸಿದ್ದಾರೆ.
ಚಾಲಕ ಸುಜೀತ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21 /2024 ಕಲಂ: 279, 304(A) ಯಂತೆ ಪ್ರಕರಣ ದಾಖಲಾಗಿರುತ್ತದೆ.