ಮಲ್ಪೆ: ಇತ್ತೀಚೆಗೆ ಕೆಲವೊಂದು ಪ್ರಕರಣಗಳಲ್ಲಿ ಕಸಕ್ಕೆ ಬೆಂಕಿಯಿಡಲು ಹೋದ ಸಂದರ್ಭದಲ್ಲಿ ಮೈಗೆ ಬೆಂಕಿ ತಗುಲಿ ಸಾಯುತ್ತಿರುವ ಕುರಿತು ವರದಿಯಾಗುತ್ತಿದೆ.
ಅಂತಹ ಮತ್ತೊಂದು ಘಟನೆ ಮಲ್ಪೆಯ ಕೊಡವೂರಿನಲ್ಲಿ ವರದಿಯಾಗಿದೆ.ಸಾರಾ ದೇವದಾಸ ಎಂಬ ಮಹಿಳೆಯು ಮಂಗಳವಾರ ಮನೆಯ ವಠಾರದ ಕಸದ ರಾಶಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಸಕ್ಕೆ ಸೀಮೆ ಎಣ್ಣೆ ಹಾಕುವಾಗ ಆಕಸ್ಮಿಕವಾಗಿ ಸೀಮೆ ಎಣ್ಣೆ ನೈಟಿಗೆ ತಾಗಿ ಸಾರಾ ದೇವದಾಸರವರು ಕಸಕ್ಕೆ ಬೆಂಕಿ ಹಚ್ಚಿದಾಗ ಸಾರಾ ದೇವದಾಸ ರವರ ನೈಟಿಗೆ ಬೆಂಕಿ ತಾಗಿ ಗಂಭೀರವಾಗಿ ಗಾಯಗೊಂಡಿದ್ದರು.
ನಂತರ ಮನೆಯವರು ಹೊರಗೆ ಬಂದು ಬೆಂಕಿ ಆರಿಸಿ ನೋಡಿದಾಗ ಸಾರಾ ದೇವದಾಸ ರವರ ದೇಹ ಸಂಪೂರ್ಣ ಸುಟ್ಟು ಹೋಗಿದ್ದು ನಂತರ ವಾಹನದಲ್ಲಿ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತೀವೃ ನಿಗಾ ಘಟಕದಲ್ಲಿರಿಸಿದ್ದು, ಹೀಗೆ ಚಿಕಿತ್ಸೆಯಲ್ಲಿರುತ್ತಾ ಸಾರಾ ದೇವದಾಸ ರವರು ರಾತ್ರಿ 11:20 ಗಂಟೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.