ಮಂಗಳೂರು: ಜೆರೊಸಾ ಶಾಲೆಯ ವಿವಾದದ ಬೆನ್ನಲ್ಲೆ ಡಿಡಿಪಿಐ ವರ್ಗಾವಣೆ

ಮಂಗಳೂರು: ಹಿಂದೂ ಧರ್ಮದ ನಿಂದನೆ ಮಾಡಲಾಗಿದೆ ಎಂಬ ಪೋಷಕರ ಆರೋಪದ ಬಳಿಕ ಉಂಟಾದ ವಿವಾದದ ಬೆನ್ನಲ್ಲೇ ದ.ಕ.ಜಿಲ್ಲಾ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.

ಡಿಡಿಪಿಐ ದಯಾನಂದ ನಾಯ್ಕರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಿಸಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಡಿಡಿಪಿಐ ಆಗಿ ನಿಯುಕ್ತಿಗೊಂಡಿದ್ದಾರೆ. ಜೆರೋಸಾ ಶಾಲೆಯ ವಿವಾದವನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ದಯಾನಂದ ನಾಯ್ಕ ಅವರು ವಿಫಲರಾಗಿದ್ದಾರೆಂದು ದ.ಕ.ಜಿಲ್ಲಾ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದರು.

Latest Indian news

Popular Stories