ಮಂಗಳೂರು: ಚಿಕಿತ್ಸೆಗೆ ದಾಖಲಾದ ಮಹಿಳೆಯ ಸಹಾಯಕ್ಕೆ ನಿಂತವನಿಂದಲೇ ಅತ್ಯಾಚಾರ

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದ ಮಹಿಳೆಯನ್ನು ಸಹಾಯಕ್ಕೆಂದು ಆಸ್ಪತ್ರೆಯಲ್ಲಿ ನಿಂತವನೇ ಅತ್ಯಾಚಾರ ಮಾಡಿದ್ದಲ್ಲದೇ ಬಳಿಕ ಮಹಿಳೆಯನ್ನು ನಿರಂತರ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಕದ್ರಿ ಪೊಲೀಸರು ಕಾಸರಗೋಡು ಮೂಲದ ಯುವಕನನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಹೊಸದುರ್ಗದ ಸುಜಿತ್ ಬಂಧಿತ ಆರೋಪಿ.

ಫಿಸ್ತುಲಾ ಕಾಯಿಲೆ ಹಿನ್ನೆಲೆಯಲ್ಲಿ ಕೇರಳದ ಕಾಸರಗೋಡಿನ‌ ಮಹಿಳೆ ಮಾರ್ಚ್ 13ರಂದು ಸುಜಿತ್ ಜೊತೆ ಬಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ 16ರಂದು ಆಸ್ಪತ್ರೆಯ ಕೊಠಡಿಯಲ್ಲೇ ಸುಜಿತ್ ಮಹಿಳೆಯನ್ನು ಅತ್ಯಾಚಾರ ಮಾಡಿದ್ದು, ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದಿದ್ದ. ಬಳಿಕ ಫೋಟೋ ತೋರಿಸಿ ಹಲವು ಬಾರಿ ಮಂಗಳೂರಿಗೆ ಕರೆಸಿ ವಿವಿಧೆಡೆ ಅತ್ಯಾಚಾರ ಮಾಡಿದ್ದಾನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Latest Indian news

Popular Stories