ಮಣಿಪಾಲ: ಗಾಂಜಾ ಸೇವನೆ ಕೇರಳ ಮೂಲದ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

ಮಣಿಪಾಲ: ಗಾಂಜಾ ಸೇವನೆ ಮಾಡಿದ ಆರೋಪದಡಿಯಲ್ಲಿ ಕೇರಳ ಮೂಲದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.

ಫೆಬ್ರವರಿ 7 ರಂದು ಪಿಎಸ್‌ಐ ರಾಘವೇಂದ್ರ ಸಿ ರವರು ಸಿಬ್ಬಂದಿಯೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಮಣಿಪಾಲದ ಡಿಸಿ ಕಛೇರಿ ರಸ್ತೆಯ ಪಲ್ಲವಿ ಸ್ಟೋರ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೇರಳ ನಿವಾಸಿ ಅಹಬ್ ಅಬ್ದುಲ್ಲಾ ಶಮೀಮ್ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಸಿಬ್ಬಂದಿ ರವರ ಜೊತೆಯಲ್ಲಿ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿತ್ತು.

ಆರೋಪಿಯು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಎಂಬುದಾಗಿ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ.

ಈ ಬಗ್ಗೆ  ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 33/2024 ಕಲಂ: 27(b) NDPS ಕಾಯದೆ ಯಂತೆ ಪ್ರಕರಣ ದಾಖಲಿಸಲಾಗಿದೆ. 

Latest Indian news

Popular Stories