ಅಪ್ರಾಪ್ತ ಬಾಲಕ ಬೈಕ್ ಸವಾರಿ: ತಂದೆಗೆ ದಂಡ ವಿಧಿಸಿದ ನ್ಯಾಯಾಧೀಶೆ

ಕಾರವಾರ : ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ಅವಕಾಶ ನೀಡಿದ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಶಿರಸಿಯ ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಶಾರದಾದೇವಿ ಅವರು ಬಾಲಕನ ತಂದೆಗೆ ದಂಡ ವಿಧಿಸಿ ಆದೇಶ ಹೊರಡಿಸಿದ ಘಟನೆ ನಿನ್ನೆ ನಡೆದಿದೆ.
ಕೇಶವ ನಿಂಗಪ್ಪ ರಾಡಿಗೇರ ಅವರು ತಮ್ಮ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದರು. ಶಿರಸಿ ಟ್ರಾಫಿಕ್ ಪೊಲೀಸರು ಇದನ್ನು ಪತ್ತೆ ಹಚ್ಚಿದ್ದರು.

ಅಪ್ರಾಪ್ತ ಮಗನಿಗೆ ಬೈಕ್ ಚಲಾವಣೆಗೆ ನೀಡಿದ ಕಾರಣ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ, 25 ಸಾವಿರ ದಂಡ ವಿಧಿಸಲಾಗಿದೆ. ಸೊರಬ ತಾಲ್ಲೂಕಿನ ಕೇಶವ ಅವರು ಈಗ ನ್ಯಾಯಾಲಯಕ್ಕೆ ದಂಡ ಪಾವತಿಸಬೇಕಾಗಿದೆ.‌

ಘಟನೆ ಹಿನ್ನೆಲೆ :
ಶಿರಸಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗಪ್ಪ ಅವರು ತಮ್ಮ ವ್ಯಾಪ್ತಿಯ ಐದು ಸರ್ಕಲ್ ಬಳಿ ಕಳೆದ ಮೇ. 20 ರಂದು ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಅಪ್ರಾಪ್ತ ಬಾಲಕ ನೊಂದಣಿಯಾಗದೇ ಇರುವ ಎನ್,ಎಸ್-200 ಪಲ್ಸರ್ ಬೈಕ್‌ನ್ನು ಚಲಿಸಿಕೊಂಡು ಹೋಗುತ್ತಿದ್ದ. ಬೈಕ್ ಮಾಲಕ ಸೊರಬಾ ತಾಲೂಕಿನ ಗುತ್ತೆಮ್ಮ ದೇವಸ್ಥಾನ ಕ್ರಾಸ್ ನ ನಿವಾಸಿ
ಕೇಶವ ನಿಂಗಪ್ಪ ರಾಡಗೇರ ಎಂದು ಪತ್ತೆ ಹಚ್ಚಲಾಯಿತು. ಈತನ ಮೇಲೆ ಅಪ್ರಾಪ್ತ ಬಾಲಕನಿಗೆ ಮೋಟಾರ ಸೈಕಲನ್ನು ಸವಾರಿ ಮಾಡಲು ನೀಡಿದ ಅಪರಾಧದ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪಿ.ಎಸ್.ಐ ನಾಗಪ್ಪ ಅವರು ಶಿರಸಿಯ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಪ್ರಿನ್ಸಿಪಲ್ ಜೆ.ಎಮ್.ಎಸ್.ಸಿ ನ್ಯಾಯಾಲಯಕ್ಕೆ ದೋಷಾರೂಪಣೆ ಪತ್ರ ಸಲ್ಲಿಸಿದ್ದರು.

ಜೂ . 11ರಂದು ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾರದಾದೇವಿ .ಎಚ್. ಅವರು ಅಪ್ರಾಪ್ತ ಬಾಲಕನ ತಂದೆ ಕೇಶವ ರಾಡಗೇರ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
…..

Latest Indian news

Popular Stories