ನಗರ ಸದಸ್ಯ ಮುಸ್ತಪರವರ ಮನವಿಗೆ ಸ್ಪಂದಿಸಿದ ಶಾಸಕರು
ಮಡಿಕೇರಿ ನಗರದ ಹಿರಿಯ ಪ್ರಾಥಮಿಕ ಹಿಂದೂಸ್ತಾನಿ ಶಾಲೆಯ ಮೇಲ್ಚಾವಣಿ ಹಾಗೂ ಕಟ್ಟಡವು ಶಿಥಿಲಗೊಂಡು ಕುಸಿದು ಬೀಳುವ ಹಂತದಲ್ಲಿದ್ದು ವಿದ್ಯಾರ್ಥಿಗಳಿಗೆ ಅಪಾಯಕಾರಿಯಾಗುತ್ತಿದೆ, ತಕ್ಷಣ ದುರಸ್ತಿ ಪಡಿಸ ಬೇಕೆಂದು ನಗರ ಸಭಾ ಸದಸ್ಯರಾದ ಎಂ ಎ ಮುಸ್ತಫಾ ರವರು ಶಾಸಕರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದ ಮೇರೆಗೆ ತಕ್ಷಣವೇ ಮನವಿಯನ್ನು ಪರಿಗಣಿಸಿದ ಶಾಸಕ ಡಾ| ಮಂತರ್ ಗೌಡರವರು ಶಾಲೆಯ ದುರಸ್ತಿಗಾಗಿ ರೂ ಎರಡು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದರು.