ರಾಜ್ ಕುಂದ್ರಾ ಪೊಲೀಸ್ ಕಸ್ಟಡಿ ವಿಸ್ತರಿಸಿದ ಮುಂಬೈ ಕೋರ್ಟ್

ಮುಂಬೈ: ಉದ್ಯಮಿ ರಾಜ್‌ಕುಂದ್ರಾ ಬ್ಲೂ ಫಿಲ್ಮ್ ಪ್ರಕರಣಕ್ಕೆ ಸಂಬ0ಧಿಸಿದ0ತೆ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಯ ಮನೆಗೆ ಮುಂಬೈ ಕ್ರೈಂಬ್ರ‍್ಯಾ0ಚ್ ಪೊಲೀಸರು ಧಾವಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿದೆ.
ಈ ನಡುವೆಯೇ ಕುಂದ್ರಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂಬೈ ಕೋರ್ಟ್ ಜುಲೈ 27ರ ವರೆಗೆ ವಿಸ್ತರಿಸಿದೆ. ನೀಲಿ ಚಿತ್ರ ತಯಾರಿಕೆಗೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಹಲವಾರು ಬ್ಯಾಂಕ್‌ಗಳಲ್ಲಿ ಕುಂದ್ರಾ ಹಣದ ಹೊಳೆ ಹರಿಸಿರುವುದನ್ನು ಗಮನಿಸಿದ್ದಾರೆ.
ಬ್ಲೂ ಫಿಲ್ಮ್ಂ ಮಾಡಿ ಅದನ್ನು ವಿದೇಶಕ್ಕೆ ರವಾನೆ ಮಾಡುತ್ತಿದ್ದ ಕುಂದ್ರಾ ಆಫ್ರಿಕಾದ ಬ್ಯಾಂಕ್‌ನಲ್ಲಿಯೂ ಹಣ ಇಟ್ಟಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಇದರ ತನಿಖೆಗೆ ಮುಂದಾಗಿದ್ದಾರೆ. ಜತೆಗೆ ನಟಿ ಶಿಲ್ಪಾ ಶೆಟ್ಟಿ ಅವರ ವಿಚಾರಣೆ ಕೈಗೊಳ್ಳುವ ಸಾಧ್ಯತೆ ಇದೆ.
ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಇವರ ಪೊಲೀಸ್ ಕಸ್ಟಡಿ ಅವಧಿ ಇಂದು (ಶುಕ್ರವಾರ) ಅಂತ್ಯಗೊ0ಡ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.

Latest Indian news

Popular Stories

error: Content is protected !!