ನಾಗ್ಪುರ: ಬಜಾಜ್ ನಗರದ ರಸ್ತೆಯಲ್ಲಿ ಅಪರಿಚಿತ ದಂಪತಿಗಳು ಶನಿವಾರ ಮಧ್ಯರಾತ್ರಿಯ ನಗ್ನವಾಗಿ ಸುತ್ತಾಡುತ್ತಿದ್ದರು. ನಂತರ ಬಜಾಜ್ ನಗರ ಪೊಲೀಸರಿಂದ ಪತ್ತೆಯಾದ ದಂಪತಿಗಳು ಮಾನಸಿಕ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ದಂಪತಿ ಮತ್ತು ಅವರ ಕುಟುಂಬಕ್ಕೆ ಕೌನ್ಸಿಲಿಂಗ್ ಮಾಡಿ ಯಾವುದೇ ಪ್ರಕರಣ ದಾಖಲಿಸದೆ ಕಳುಹಿಸಿಕೊಟ್ಟ ಕುರಿತು ವರದಿಯಾಗಿದೆ.
ಬೆತ್ತಲೆ ದಂಪತಿಗಳು ರಸ್ತೆಯಲ್ಲಿ ಜಗಳವಾಡುತ್ತಿರುವ ವೀಡಿಯೊ ಭಾನುವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟು ಹಾಕಿತ್ತು.
ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಮದ್ಯ ಸೇವಿಸಿದ ನಂತರ ಬಟ್ಟೆ ಇಲ್ಲದೆ ಮನೆಯಿಂದ ಹೊರಬರುವ ಅಭ್ಯಾಸವಿದೆ ಎಂದು ತಿಳಿದುಬಂದಿದೆ . ಶನಿವಾರ ರಾತ್ರಿ, ವ್ಯಕ್ತಿ ಬಟ್ಟೆ ಇಲ್ಲದೆ ಹೊರಗೆ ಕಾಲಿಟ್ಟಾಗ, ಹೆಂಡತಿಯೂ ಅವನನ್ನು ಹಿಂಬಾಲಿಸಿದ್ದಾಳೆ.
ಬೆತ್ತಲೆ ಜೋಡಿಯ ದೃಶ್ಯ ದಾರಿಹೋಕರನ್ನು ಬೆಚ್ಚಿ ಬೀಳಿಸಿತು. ಕೋಪದ ಭರದಲ್ಲಿ ದಂಪತಿಗಳು ಬಟ್ಟೆಯಿಲ್ಲದೆ ಹೊರನಡೆದಿದ್ದಾರೆ ಎಂದು ಹಲವರು ಊಹಿಸಿದ್ದಾರೆ. ಅನೇಕ ವೀಕ್ಷಕರು ಅವರು ಸಮೀಪದಲ್ಲಿ ನಿಲ್ಲಿಸಿದ ಕಾರಿನಿಂದ ಹೊರಬಂದಿದ್ದಾರೆ ಎಂದು ಊಹಿಸಿದ್ದರು. ವಾಸ್ತವದಲ್ಲಿ, ರಸ್ತೆಯಲ್ಲಿ ನಾಟಕ ನಡೆಯುವಾಗ ಕಾರಿನ ಮಾಲೀಕರು ಚಹಾ ಕುಡಿಯಲು ಹೋಗಿದ್ದರು.
ನಂತರ ಮಾಹಿತಿ ತಿಳಿದು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಮಾನಸಿಕ ಅಸ್ವಸ್ಥರೆಂಬುವುದು ತಿಳಿದು ಬಂದಿದೆ.