ಜ.29ರಂದು ಬಿ.ವೈ.ವಿಜಯೇಂದ್ರ ಬೀದರ್ ಗೆ

ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಬಿ.ವೈ.ವಿಜಯೇಂದ್ರ ಅವರು ಜ.29ರಂದು ಬೀದರ್ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಬೂತ್ ಸಂಖ್ಯೆ 175ರಲ್ಲಿರುವ ವಡ್ಡರ ಕಾಲೊನಿಯ ಲಾಲಪ್ಪ ಅವರ ಮನೆಗೆ ವಿಜಯೇಂದ್ರ ಭೇಟಿ ಕೊಡುವರು.

ಅದಾದ ಬಳಿಕ ಬೀದರ್ ತಾಲ್ಲೂಕಿನ ಚಿಟ್ನಾ ವಾಡಿಯಲ್ಲಿ ಬಸವೇಶ್ವರರ ಮೂರ್ತಿ ಅನಾವರಣಗೊಳಿಸುವರು ಎಂದು ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ ಮಾಹಿತಿ ನೀಡಿದರು. ಇದಾದ ನಂತರ ಗುಂಪಾದಿಂದ ಗಣೇಶ ಮೈದಾನದವರೆಗೆ ಬೈಕ್‌ ರಾಲಿ ನಡೆಯಲಿದೆ. ಬಳಿಕ ವಿಜಯೇಂದ್ರ ಅವರ ಅಭಿನಂದನಾ ಸಮಾರಂಭ ನಡೆಯಲಿದ್ದು ಅದರಲ್ಲಿ 10 ಸಾವಿರ ಜನ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇದೇ ವೇಳೆ ಬೀದರ್ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷ ಸೋಮನಾಥ ಪಾಟೀಲ ಅವರಿಗೆ ನಿರ್ಗಮಿತ ಅಧ್ಯಕ್ಷ ಶಿವಾನಂದ ಮಂಠಾಳಕರ ಅವರು ಅಧಿಕಾರ ಹಸ್ತಾಂತರಿಸುವರು. ಸಂಜೆ ವಿಜಯೇಂದ್ರ ಅವರು ಪಕ್ಷದ ಕಚೇರಿಗೆ ಭೇಟಿ ಕೊಟ್ಟು ಪ್ರಮುಖರ ಜತೆ ಸಭೆ ನಡೆಸುವರು ಎಂದು ವಿವರಿಸಿದರು.

Latest Indian news

Popular Stories