ಪೇಜಾವರ ಸ್ವಾಮಿಗಳು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ: ವಿಕಾಸ್ ಹೆಗ್ಡೆ ಆರೋಪ

ಕುಂದಾಪುರ: ಪೇಜಾವರ ಸ್ವಾಮಿಗಳು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮಾತನ್ನು ಸಂಪೂರ್ಣ ಕೇಳಿ ಮತ್ತೆ ಟೀಕೆ ಮಾಡುವುದು ಉತ್ತಮ. ಬಿಜೆಪಿಯವರು ರಾಜಕೀಯ ಉದ್ದೇಶಕ್ಕೆ ರಾಹುಲ್ ಗಾಂಧಿಯವರ ಮಾತನ್ನು ತಿರುಚಿ ಹೇಳುತ್ತಿದ್ದಾರೆ. ಆದರೆ ಪೇಜಾವರ ಸ್ವಾಮಿಗಳು ಸಂಪೂರ್ಣ ಸಮಾಜಕ್ಕೆ ಬುದ್ಧಿ ಹೇಳುವವರು ಒಂದು ಪಕ್ಷದ ಪರವಹಿಸಿ ಮಾತನಾಡುವುದು ಅವರಿಗೆ ಶೋಭೆ ತರುವಂತಹುದಲ್ಲಾ. ರಾಹುಲ್ ಗಾಂಧಿ ಬಿಜೆಪಿಯ ನಕಲಿ ಹಿಂದುತ್ವವನ್ನು ಟೀಕಿಸಿದ್ದು ಬಿಟ್ಟರೆ ಎಲ್ಲೂ ಸಮಸ್ತ ಹಿಂದೂಗಳ ಭಾವನೆಗೆ ನೋವಾಗುವ ಮಾತನ್ನು ಆಡಲಿಲ್ಲಾ. ಎಲ್ಲಾ ಸಮಾಜದಿಂದ ಗೌರವಿಸಲ್ಪಡುವ ಪೇಜಾವರ ಸ್ವಾಮಿಗಳು ಬಿಜೆಪಿ ವಕ್ತಾರರಂತೆ ವರ್ತಿಸುವುದು ಸರಿಯಲ್ಲಾ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Latest Indian news

Popular Stories