ಕಾರವಾರ: ಬೆಂಗಳೂರಿನ ಹಿಲ್ ಸೈಡ್ ಪಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಇಂದು ಗೋಕರ್ಣದ ಬಳಿ ಸಮುದ್ರಕ್ಕೆ ಇಳಿದು ಅಲೆಗೆ ಸಿಕ್ಕಿ ಕೊಚ್ಚಿ ಹೋದರು .ತಕ್ಷಣ ಬೀಚ್ ನಲ್ಲಿದ್ದ ಲೈಫ್ ಗಾರ್ಡಗಳು ಐವರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಓರ್ವ ಮಾತ್ರ ಅಲೆಗೆ ಸಿಕ್ಕು ನಾಪತ್ತೆಯಾಗಿದ್ದಾನೆ.
ಕೇರಳ ಮೂಲದ ಇವರು ಬೆಂಗಳೂರಿನಲ್ಲಿ ಫಾರ್ಮಸಿ ಓದುತ್ತಿದ್ದು, ಗೋಕರ್ಣಕ್ಕೆ ಪ್ರವಾಸ ಬಂದಿದ್ದರು. ವಿನಯ್ (23) ನಾಪತ್ತೆ ಆಗಿದ್ದಾನೆ.
ಮಷಿರಾ( 25), ಗೋಪಿ (23), ಮುರುಳಿ(23) ತನಸ್ವರ (23) ಮನೋಜಾ(25) ಎಂಬುವವರನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರ ವಾಗಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆ ಗೆ ಸಾಗಿಸಲಾಗಿದೆ. ಬದುಕುಳಿದ ಎಲ್ಲರನ್ನು ಮಣಿಪಾಲ್ ಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.ಗೋಕರ್ಣ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
…….