ಪ್ರತಿಭಟನಾ ಸ್ಥಳದಿಂದ ಜೆಸಿಬಿ ತೆಗೆಯಿರಿ ಇಲ್ಲದಿದ್ದರೇ ಕಠಿಣ ಕ್ರಮ ಎಂದು ರೈತರಿಗೆ ಪೊಲೀಸರ ಎಚ್ಚರಿಕೆ

ಬೆಂಗಳೂರು.ಫೆಬ್ರವರಿ.21: ದೇಶದ ರೈತರು ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಮತ್ತೆ ಆರಂಭಿಸಲು ಸಜ್ಜಾಗಿದ್ದಾರೆ. ಈ ವೇಳೆ ರೈತರ ಪ್ರತಿಭಟನಾ ಸ್ಥಳದಿಂದ ತಮ್ಮ ಜೆಸಿಬಿ, ಇಟಾಚಿ ಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ವಾಹನ ಮಾಲೀಕರಿಗೆ ಹರಿಯಾಣ ಪೊಲೀಸರು ಬುಧವಾರ ಎಚ್ಚರಿಕೆ ನೀಡಿದ್ದಾರೆ.ರೈತರು ತಮ್ಮ ಆದೇಶ ಪಾಲಿಸದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಈ ಅಗೆಯುವ ಯಂತ್ರಗಳನ್ನು ಪ್ರತಿಭಟನಾಕಾರ ರೈತರು ಬಳಸಿದರೆ ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಬಿಂದುಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಹಾನಿಯಾಗುತ್ತದೆ ಎಂದಿದ್ದಾರೆ. “ಪೋಕ್ಲೇನ್‌ಗಳು, ಜೆಸಿಬಿಗಳ ಮಾಲೀಕರು ಮತ್ತು ನಿರ್ವಾಹಕರಿಗೆ: ದಯವಿಟ್ಟು ಪ್ರತಿಭಟನಾಕಾರರಿಗೆ ನಿಮ್ಮ ವಾಹನಗಳನ್ನು ನೀಡಬೇಡಿ ಮತ್ತು ಈಗಾಗಲೇ ಹಾಗೇ ಮಾಡಿದ್ದರೆ ಪ್ರತಿಭಟನಾ ಸ್ಥಳದಿಂದ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ. ಏಕೆಂದರೆ ಅವುಗಳನ್ನು ಭದ್ರತಾ ಪಡೆಗಳಿಗೆ ಹಾನಿ ಉಂಟುಮಾಡಬಹುದು. ಇದು ಜಾಮೀನು ರಹಿತ ಅಪರಾಧ ಮತ್ತು ನಿಮ್ಮನ್ನು ಕ್ರಿಮಿನಲ್ ಆರೋಪಿಯನ್ನಾಗಿಸಬಹುದು” ಎಂದು ಹರಿಯಾಣ ಪೊಲೀಸರು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.ಎಂಎಸ್‌ಪಿಗೆ ಆಗ್ರಹಿಸಿ ರೈತರ ಪ್ರತಿಭಟನೆದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗೆ ಎಂಎಸ್‌ಪಿ ದರದಲ್ಲಿ ಐದು ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಬಿಜೆಪಿ ನೇತೃತ್ವದ ಕೇಂದ್ರದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ.

ಇದಾದ ನಂತರ ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಬಿಂದುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಪುನರಾರಂಭಿಸಲಿದ್ದಾರೆ. ಪ್ರತಿಭಟನಾ ನಿರತ ರೈತರು ಸರ್ಕಾರ ಹಾಕಿರುವ ಬ್ಯಾರಿಕೇಡ್‌ಗಳನ್ನು ಮುರಿಯಲು ಈ ಜೆಸಿಬಿ ಮತ್ತು ಇಟಾಚಿ ಯಂತ್ರಗಳನ್ನು ಬಳಸುತ್ತಾರೆ. ಹೀಗಾಗಿ ಅಂತರರಾಜ್ಯ ಗಡಿಗಳಿಂದ ಬುಲ್ಡೋಜರ್‌ಗಳು ಮತ್ತು ಇತರ ಮಣ್ಣು ಕೆದಕುವ ಉಪಕರಣಗಳನ್ನು ವಶಪಡಿಸಿಕೊಳ್ಳುವಂತೆ ಹರಿಯಾಣ ಪೊಲೀಸರು ಮಂಗಳವಾರ ಪಂಜಾಬ್‌ ಪೊಲೀಸರು ಒತ್ತಾಯಿಸಿದ್ದಾರೆ

Latest Indian news

Popular Stories