ದಿ ಹಿಂದುಸ್ತಾನ್ ಗಝೆಟ್: ಕರಾವಳಿಯಿಂದ ಇಬ್ಬರು ಉನ್ನತ ಅಧಿಕಾರಿಗಳು ರಾಜೀನಾಮೆ ಪ್ರವೇಶಿಸಿದ್ದರು. ಐ.ಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಐಎಎಸ್ ಅಧಿಕಾರಿ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇಬ್ಬರೂ ಕೂಡ ತಮಿಳುನಾಡು ಮೂಲದವರು ಎಂಬುವುದು ವಿಶೇಷ.
ಅಣ್ಣಾಮಲೈ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತರೆ, ಸಸಿಕಾಂಥ್ ಸೆಂಥಿಲ್ ತಿರುವಳ್ಳುವರ್ ಕ್ಷೇತ್ರದಿಂದ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ.
ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಮತ್ತು ತಿರುವಳ್ಳೂರಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ತಮಿಳಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳ ಮೇಲಿನ ನಾಚಿಕೆಗೇಡಿನ ದೌರ್ಜನ್ಯವನ್ನು ನಿಲ್ಲಿಸಿ. ಜೈ ಭೀಮ್, ಜೈ ಸಂವಿಧಾನ್ ಎಂದು ಅವರು ಹೇಳಿದಾಗ ಬಿಜೆಪಿ ಸಂಸದರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್ ಇದ್ಯಾವುದು ಕಡತಕ್ಕೆ ಸೇರುವುದಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇರ್ಪಡೆಯ ಮುನ್ನ ಸಸಿಕಾಂಥ್ ಸೆಂಥಿಲ್ ಜನಪರ ಹೋರಾಟದಲ್ಲಿ ಭಾಗವಹಿಸಿ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಧನಿ ಎತ್ತುತ್ತಿದ್ದರು. ಇದೀಗ ಅವರು ಪಾರ್ಲಿಮೆಂಟ್ ನಲ್ಲೂ ಸಂವಿಧಾನ ಪರ ದನಿ ಎತ್ತುತ್ತಿದ್ದಾರೆ.
ವೀಡಿಯೋ: