ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್’ನಲ್ಲಿ ಪ್ರಯಾಣಿಕರೊಬ್ಬರ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಲಾಗಿದೆ
ರೇಷ್ಮಾ .ಎನ್. ಎಂಬುವವರು ಸೋಮವಾರ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಮಂಗಳೂರಿನಿಂದ ಬಂದ ಮೈಸೂರು ಬಸ್ಸು ನಂಬ್ರ ಕೆಎ 19 ಎಫ್ 3467 ದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದರು.
ರೇಷ್ಮಾ ಅವರು ನಿಂತು ಕೊಂಡು ಹ್ಯಾಂಡ್ ಬ್ಯಾಗನ್ನು ಆಧಾರ್ ಕಾರ್ಡ್ ತೆಗೆಯಲು ಹೋದಾಗ ಹ್ಯಾಂಡ್ ಬ್ಯಾಗಿನ ಜಿಪ್ ಸ್ವಲ್ಪ ತೆರೆದು ಕೊಂಡಿದ್ದು, ಬಳಿಕ ನೋಡಿದಾಗ ಹ್ಯಾಂಡ್ ಬ್ಯಾಗಿನ ಒಳಗಡೆ ಇನ್ನೊಂದು ಸಣ್ಣ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಪರ್ಸ್ ಇಟ್ಟ ಸ್ದಳದಲ್ಲಿ ಇರಲಿಲ್ಲ. ಕೂಡಲೇ ಬಸ್ಸು ನಿರ್ವಾಹಕರಲ್ಲಿ ವಿಚಾರ ತಿಳಿಸಿದಾಗ ಬಸ್ಸು ನಿರ್ವಾಹಕರು ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ವಿಚಾರಿಸಿರುತ್ತಾರೆ. ಈ ಘಟನೆಯ ಬಗ್ಗೆ ಪರಿಶೀಲಿಸುವಾಗ ಪುತ್ತೂರಿನಲ್ಲಿ ಬಸ್ಸು ಹತ್ತುವ ಸಮಯ ವಿಪರೀತ ಪ್ರಯಾಣಿಕರು ಇದ್ದುದರಿಂದ ಯಾರೋ ಕಳ್ಳರು ಬ್ಯಾಗಿನ ಒಳಗಡೆ ಪರ್ಸ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ತುಂಬಿದ್ದ ಪರ್ಸನ್ನು ಕಳವುಗೈದಿದ್ದಾರೆ.
ಕಳವಾದ ಪರ್ಸ್ ನಲ್ಲಿ ಒಟ್ಟು ಸುಮಾರು 136 ಗ್ರಾಂ ಚಿನ್ನಾಭರಣಗಳಿದ್ದು, ಅಂದಾಜು ಮೌಲ್ಯ ರೂ 7,94,000/- ಆಗಬಹುದು.
ಈ ಬಗ್ಗೆ ಪುತ್ತೂರು ನಗರ ಠಾಣೆ ಅ.ಕ್ರ: 12/2024 ಕಲಂ 379 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.