ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರೇಖಾ ಗುಪ್ತಾ ಅವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಪ್ರಮಾಣವಚನ ಬೋಧಿಸಿದ್ದಾರೆ.
ದೆಹಲಿಯ ಇನ್ಮುಂದೆ ರೇಖಾ ಗುಪ್ತಾ ಆಡಳಿತ ಇರಲಿದ್ದು, ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ರಾಷ್ಟ್ರರಾಜಧಾನಿ ಆಳಿದ 4 ನೇ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿ ರೇಖಾ ಗುಪ್ತಾ ಪಾತ್ರರಾಗಿದ್ದಾರೆ.
ರೇಖಾ ಗುಪ್ತಾ ಜತೆಗೆ , ಪರ್ವೇಶ್ ವರ್ಮಾ, ಮಣೀಂದರ್ ಸಿಂಗ್ ಸಿರ್ಸಾ,ಕಪಿಲ್ ಮಿಶ್ರಾ, ಆಶೀಶ್ ಸೂದ್, ರವೀಂದ್ರಕುಮಾರ್ ಇಂದ್ರಜ್, ಪಂಕಜ್‌ಕುಮಾರ್ ಸಿಂಗ್ ಮಂತ್ರಿಮಂಡಲದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನು, 27 ವರ್ಷದ ಬಳಿಕ ಗೆದ್ದು ಬೀಗಿದ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಮಹಿಳಾ ಶಾಸಕಿಯನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ABVP ಹಿನ್ನೆಲೆಯಿಂದ ಬಂದವರಾಗಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎನ್‌ಡಿಎ ನಾಯಕರು ಭಾಗವಹಿಸಿ ಹೊಸ ಮುಖ್ಯಮಂತ್ರಿಗೆ ಶುಭ ಕೋರಿದ್ದಾರೆ.