ಶಿವಮೊಗ್ಗ: ಕಾರು, ಬೈಕು, ರಿಕ್ಷಾಗಳ ಗಾಜು ಪುಡಿ ಪುಡಿಗೈದ ದುಷ್ಕರ್ಮಿಗಳು

ಶಿವಮೊಗ್ಗದಲ್ಲಿ ಮತ್ತೆ ಪುಂಡರು ಅಟ್ಟಹಾಸ ಮೆರೆದಿದ್ದು, ಮನೆಯಮುಂದೆ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ದುಷ್ಕರ್ಮಿಗಳು ಪುಡಿಗೈದಿದ್ದಾರೆ.

ದೊಡ್ಡಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳ ಗಾಜುಗಳನ್ನು ರಾತ್ರೋ ರಾತ್ರಿ‌ ಪುಂಡರ ತಂಡ ಹಾನಿ ಮಾಡಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುಂಡರ ಪತ್ತೆಗೆ ಬಲೆ ಬಿಸಿದ್ದಾರೆ.

Latest Indian news

Popular Stories