ಗಾಂಜಾ ಮಾರಾಟ : ೬ ಆರೋಪಿಗಳ ಬಂಧನ

ಮಡಿಕೇರಿ ಜೂ.೭ : ಮಡಿಕೇರಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ೬ ಆರೋಪಿಗಳನ್ನು ಜಿಲ್ಲಾ ಅಪರಾಧ ಗುಪ್ತದಳ ಬಂಧಿಸಿದೆ.
ನಗರದ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಎ.ಅಸ್ಗರ್ ಅಲಿ(೪೦), ಮಹದೇವಪೇಟೆಯ ಅಬ್ದುಲ್ ರಹೀಂ(೪೨), ಸುಂಟಿಕೊಪ್ಪ ಅಯ್ಯಪ್ಪ ದೇವಾಲಯ ಸಮೀಪದ ನಿವಾಸಿ ಸಫಾನ್(೩೨), ಮಹದೇವಪೇಟೆ ನಿವಾಸಿ ಎಂ.ಜಬೀವುಲ್ಲಾ(೪೨) ಹಾಗೂ ಆಝಾದ್‌ನಗರ ನಿವಾಸಿ ಎಂ.ಕೆ.ನೌಷಾದ್ ಆಲಿ(೩೨), ಭಗವತಿ ನಗರದ ಡಿ.ಆರ್.ಸುರೇಶ್ ಬಂಧಿತರು. ಆರೋಪಿಗಳಿಂದ ೫೦ ಸಾವಿರ ರೂ. ಮೌಲ್ಯದ ಒಟ್ಟು ೪೧೫ ಗ್ರಾಂ ಗಾಂಜಾ ಹಾಗೂ ೩೫,೭೬೦ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿಯ ರಾಣ ಪೇಟೆಯ ಮನೆಯೊಂದರಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಜಿಲ್ಲಾ ಅಪರಾಧ ಗುಪ್ತ ದಳದ ಸಿಬ್ಬಂದಿಗಳು ಸೋಮವಾರ ಸಂಜೆ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ೪೧೫ ಗ್ರಾಂ ಗಾಂಜಾ ಮತ್ತು ೩೫,೭೬೦ ರೂ ನಗದು ಪತ್ತೆಯಾಗಿದೆ. ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿದ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತ ದಳದ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಎಎಸ್‌ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಶಶಿಕುಮಾರ್, ಮಹೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಫೋಟೋ :: ಕ್ರೆöÊಂ

Latest Indian news

Popular Stories

error: Content is protected !!