ಕಾರವಾರ ಸಮೀಪದ ಪ್ರಸಿದ್ದ ಗಣಪತಿ ದೇವಸ್ಥಾನದಲ್ಲಿ ಕಳ್ಳತನ

ಕಾರವಾರ :ಕಾರವಾರ ಸಮೀಪದ ಅಮದಳ್ಳಿ ಗ್ರಾಮದ ಪ್ರಸಿದ್ದ ಗಣಪತಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಬೆಳಗಿನ ಜಾವ ಕಳ್ಳತನ ವಾಗಿರಬಹುದು ಎಂದು ಊಹಿಸಲಾಗಿದೆ. ಕಳ್ಳರು ದೇವಸ್ಥಾನ ಬಾಗಿಲು ಬೀಗ ಮುರಿದು ದೇವರ ಮುಖದ ಬೆಳ್ಳಿ ಕವಚ ದೋಚಿದ್ದಾರೆ.

IMG 20240527 WA0025 Crime, Uttara Kannada

ಬೆಳ್ಳಿ ಕವಚ 6 ಕೆ.ಜಿ.ಬೆಳ್ಳಿಯದ್ದು ಎನ್ನಲಾಗಿದೆ. ಅಂದಾಜು 6 ಲಕ್ಷ ಬೆಲೆಯದ್ದು ಎಂದು ತಿಳಿದು ಬಂದಿದೆ. ಪೊಲೀಸರು ,ಬೆರಳಚ್ಚು ತಜ್ಞರು ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಅಮದಳ್ಳಿಯ ಗಣಪತಿ ಈ ಭಾಗದ ಪ್ರಸಿದ್ಧ ದೇವರು. ಆರ್ಥಿಕವಾಗಿ ಸಬಲ ದೇವರಾಗಿದ್ದು, ಬೆಳ್ಳಿ ಬಂಗಾರ ಸಾಕಷ್ಟು ಇದೆ. ಹೆದ್ದಾರಿ ಪಕ್ಕದ ದೇವಸ್ಥಾನ ಆದ್ದರಿಂದ ಕಳ್ಳರು ಯೋಜಿತ ಕಳ್ಳತನ ಮಾಡಿರುವ ಸಾದ್ಯತೆ ಇದೆ ಎನ್ನಲಾಗಿದೆ. ‌ತನಿಖೆ ನಡೆದಿದೆ.

Latest Indian news

Popular Stories