ಸಾಂದರ್ಭಿಕ ಚಿತ್ರ
ಉಡುಪಿ: ಮಣಿಪಾಲ ಮತ್ತು ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಇಂಡಸ್ ಮೊಬೈಲ್ ಟವರ್ ಕಂಪೆನಿಯ 5G BBU Card ನ್ನು ಕಳ್ಳರು ಕದ್ದಿರುವ ಕುರಿತು ದೂರು ದಾಖಲಾಗಿದೆ.
ಮಣಿಪಾಲದ ಪೆರಂಪಳ್ಳಿ ವೃತ್ತದ ಹತ್ತಿರ ಮತ್ತು ಬ್ರಹ್ಮಾವರದ ಯಡ್ತಾಡಿ ಗ್ರಾಮದ ಬಳಿಯ ಟವರ್ ನಿಂದ ಈ ಕಾರ್ಡ್ ನ್ನು ಕಳ್ಳರು ಕದಿದ್ದಾರೆ
ಇಂಡಸ್ ಮೊಬೈಲ್ ಟವರ್ ಕಂಪನಿಯ ಟೆಲಿಕಮ್ಯೂನಿಕೇಷನ್ ಟವರ್ ಗೆ ಹಲವು ತಿಂಗಳ ಹಿಂದೆ 4G ಯಿಂದ 5G ನೆಟ್ ವರ್ಕ ಗೆ ಆಪ್ ಗ್ರೇಡ್ ಮಾಡುವ ಸಲುವಾಗಿ 5G BBU Card ನ್ನು ಅಳವಡಿಸಲಾಗಿತ್ತು. ಮೊಬೈಲ್ ಟವರ್ ನಲ್ಲಿ ನೆಟ್ ವರ್ಕ್ ಸಮಸ್ಯೆ ಎದುರಾದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ಟವರ್ ನಲ್ಲಿ ಅಳವಡಿಸಿದ್ದ 5G BBU Card ನ್ನು ಟವರ್ ನಿಂದ ಬೆರ್ಪಡಿಸಿ ಕಳವು ಮಾಡಿಕೊಂಡು ಹೋಗಿರುವುದ್ದಾರೆ
ಈ ಸಂಬಂಧ ಮಣಿಪಾಲ ಮತ್ತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.