ಬೀದರ್ ನಗರದ ವಡ್ಡರ ಕಾಲೋನಿಯ ನಿವಾಸಿ ತಿಕೋಲು ಮೋಹನ್ ಜಂಗಮ ಕಾಣೆ; ಮಾಹಿತಿ ನೀಡಿದವರಿಗೆ 50 ಸಾವಿರ ರೂಪಾಯಿ ಬಹುಮಾನ

ಬೀದರ್, ಡಿ.14:- ಬೀದರ್ ನಗರದ ವಡ್ಡರ ಕಾಲೋನಿಯ ನಿವಾಸಿಯಾಗಿರುವ 21 ವಯಸ್ಸಿನ ಜಂಗಮ ಜಾತಿಯ ತಿಕೋಲು ಮೊಹನ ಯಲ್ಲಪ್ಪ ಅವನು ತನ್ನ ಸ್ನೇಹಿತ ಲಾರಿಕ್ಲೀನರ್‍ನೊಂದಿಗೆ ಬೀದರ್‍ದಿಂದ ತೆಲಂಗಾಣಕ್ಕೆ ತೆರಳಿದ ದಾರಿಮಧ್ಯೆ ದಿಃ 01-6-2019ರಂದು ತೆಲಂಗಾಣದ ನೆಲ್ಲೂರ ಜಿಲ್ಲೆಯ ಮುತ್ತುಕೂರ ಮಂಡಲದ ಪಂತಾಪಲ್ಲೇಮ್ ಬಳಿಯ ಇಮಾಮಿ ಪಾಮ್ ಆಯಿಲ್ ಫ್ಯಾಕ್ಟರಿ ಪೋರ್ಟ್ ಬೈ ಪಾಸ್ ರಸ್ತೆ ಹತ್ತಿರದಿಂದ ಕಾಣೆಯಾಗಿರುತ್ತಾನೆ, ಎಂದು ಮೋಹನನ ತಂದೆ ತಿಕೋಲು ಯಲ್ಲಪ್ಪ ರಾಮಲು ಜಂಗಮ ಪೊಲೀಸ್ ಠಾಣೆಗೆ ನೀಡಿರುವ ದೂರನಲ್ಲಿ ದೂರಿದ್ದು ಇಂದಿನ ವರೆಗೂ ಪತ್ತೆಯಾಗಲಿಲ್ಲ ಎಂದು ತಿಳಿಸಿರುತ್ತಾರೆ.
05ಅಡಿ ಎತ್ತರದ ಕೆಂಪು-ಗೋದಿ ಬಣ್ಣದ ಮೈಕಟ್ಟು ಹೊಂದಿರುವ ಹೊಸಸ್ಟೈಲ್ ತಲೆಕೂದಲಿನ ಯುವಕ ಮೊಹನ್ ಮೈ ಮೇಲೆ ಪ್ಯಾಂಟು-ಶರ್ಟ್ ಧರಿಸಿದ್ದ ಇವನ ಆಧಾರ ಗುರುತು 599418578962 ಕುರಿತು ಮಾಹಿತಿ ದೊರಕ್ಕಿದಲ್ಲಿ ತಕ್ಷಣವೆ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಅವನ ತಂದೆ ತಿಳಿಸಿದ್ದು ಈ ಕುರಿತು ನಲ್ಲೆರಾ ಪೊಲೀಸ್ ಠಾಣೆಯಲ್ಲಿ 22-6-2019ರಂದು ಪ್ರಕರಣ ದಾಖಲಾಗಿರುತ್ತದೆ, ಎಂದು ತಿಳಿಸಿದ ಮೋಹನ್‍ನ ತಂದೆ ತಿಕೋಲು ಯಲ್ಲಪ್ಪ ಜಂಗಮ ಮೋಃ 9900469258ಗೆ ಅಥವಾ ನೆಲ್ಲೂರಾ ಮತ್ತು ಬೀದರ ಜಿಲ್ಲಾ ಪೊಲೀಸ್ ಕಂಟ್ರೋಲ್‍ರೂಂಗೆ ಗುರುತಿನ ಮಾಹಿತಿ ನೀಡಿ ಸಹಕರಿಸಬೇಕೆಂದು ಮತ್ತು ಮಾಹಿತಿ ನೀಡಿದವರಿಗೆ 50,000/- ರೂಪಾಯಿ ಬಹುಮಾನ ನೀಡಲಾಗುವುದು ಎಂದು ತಿಕೋಲು ಯಲ್ಲಪ್ಪ ಜಂಗಮ ಮನವಿ ಮಾಡಿದ್ದಾರೆ.

Latest Indian news

Popular Stories