ಸುಂಟಿಕೊಪ್ಪ ಗದ್ದೆಹಳ್ಳಿ ರಸ್ತೆಯಲ್ಲಿ ಅಕ್ರಮ ಗಾಂಜಾ ದಸ್ತಗಿರಿ ಇಬ್ಬರ ಬಂಧನ

ಸುಂಟಿಕೊಪ್ಪ :ಪೊಲೀಸ್ ಠಾಣೆ ವ್ಯಾಪ್ತಿಯ ಎಮ್ಮೆ ಗುಂಡಿ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಮೇಲೆ ದಾಳಿ ನಡೆಸಿದ ಸುಂಟಿಕೊಪ್ಪ ಪೊಲೀಸರು ಗದ್ದೆ ಹಳ್ಳ ನಿವಾಸಿ, ವಿಜಯ. ಜೆ (28 ) ಮತ್ತು ಪಿರಿಯಾಪಟ್ಟಣ ತಾಲೂಕು, ಕೊಪ್ಪ ಗ್ರಾಮದ ನಿವಾಸಿ ಶ್ರೀಧರ ( 34) ಇವರುಗಳು 1 ಕೆಜಿ 450 ಗ್ರಾಂ ಗಾಂಜಾ ಶೇಖರಿಸಿಟ್ಟಿದ್ದನ್ನು ದಸ್ತಗರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ಡಿ ವೈ ಎಸ್ ಪಿ ಗಂಗಾಧರಪ್ಪ, ಸಿ ಪಿ ಐ ರಾಜೇಶ್ ಕೆ, ಸುಂಟಿಕೊಪ್ಪ ಪಿಎಸ್ಐ ಶ್ರೀಧರ್ ಎಂಸಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ.

Latest Indian news

Popular Stories