ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವೇಳೆ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಶಾಲಾ ಮಕ್ಕಳು ಮೃತ್ಯು

ಜೋಧಪುರ: ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವೇಳೆ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿರುವ ಘಟನೆ ಇಲ್ಲಿನ ಬನಾರ್‌ ಪ್ರದೇಶದಲ್ಲಿ ನಡೆದಿದೆ.

ಸೋದರ ಸಂಬಂಧಿಗಳಾದ ಇಬ್ಬರು ಮಕ್ಕಳು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಾಕು ನಾಯಿಗಳು ಅಟ್ಟಿಸಿಕೊಂಡು ಬಂದ ಪರಿಣಾಮ ಮಕ್ಕಳು ಭಯದಿಂದ ಓಡಲು ಪ್ರಾರಂಭಿಸಿದ್ದರು. ಆದರೆ, ಈ ವೇಳೆ ರೈಲು ಬರುವುದನ್ನು ಗಮನಿಸದೆ ಅವರು ರೈಲ್ವೆ ಹಳಿಗಳ ಮೇಲೆ ಪ್ರವೇಶಿಸಿದ್ದು, ಕೆಲವೇ ಕ್ಷಣಗಳಲ್ಲಿ ರೈಲು ಡಿಕ್ಕಿ ಹೊಡೆದು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಅನನ್ಯ ಕನ್ವರ್ (9) ಮತ್ತು ಯುವರಾಜ್ ಸಿಂಗ್ (11) ಎಂದು ಗುರುತಿಸಲಾಗಿದೆ. ಇವರು ಬನಾರ್ ಪ್ರದೇಶದ ಗಣೇಶಪುರ ನಿವಾಸಿಗಳಾಗಿದ್ದು, ಆರ್ಮಿ ಚಿಲ್ಡ್ರನ್ ಅಕಾಡೆಮಿಯಲ್ಲಿ ಕ್ರಮವಾಗಿ 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Latest Indian news

Popular Stories