ಉಡುಪಿ: ಅನುಮಾಸ್ಪದ ರೀತಿಯಲ್ಲಿ ಕಂಡು ಬಂದ ವ್ಯಕ್ತಿ ವಶಕ್ಕೆ – ಪ್ರಕರಣ ದಾಖಲು

ಉಡುಪಿ: ಅನುಮಾಸ್ಪದ ರೀತಿಯಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ‌ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೇ 23 ರಂದು ರಮೇಶ್ ಕುಮಾರ್ ಬಿ , ಹೆಡ್‌ ಕಾನ್ಸಟೇಬಲ್, ಉಡುಪಿ ನಗರ ಪೊಲೀಸ್ ಠಾಣೆ ಇವರು ರಾತ್ರಿ ಠಾಣಾ ಪ್ರಬಾರ ಕರ್ತವ್ಯದಲ್ಲಿರುವಾಗ ಮೇ 24 ರಂದು ಮುಂಜಾನೆ 04:45 ಗಂಟೆಗೆ 112 ಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದಂತೆ ಸ್ಥಳಕ್ಕೆ ಹೋಗಿ ನೋಡಿದಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಟ್ಟಡದ ಮರೆಯಲ್ಲಿ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದಿದ್ದ.

ಅನುಮಾಸ್ಪದ ವ್ಯಕ್ತಿ ಲಕ್ಷ್ಮಣ (26), ಬಾಗಲಕೋಟೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಸಮರ್ಪಕವಾದ ಉತ್ತರ ನೀಡದೆ ಇದ್ದು ಯಾವುದೋ ಬೇವಾರಂಟು ತಕ್ಷೀರು ನಡೆಸುವ ಸಂಶಯ ಬಂದಿರುವುದರಿಂದ ಆತನ ವಿರುದ್ದ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2024 ಕಲಂ: 96(B) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories