ಉಡುಪಿ: 30 ಗ್ರಾಂ ಗೋಲ್ಡ್ ಮೂಲಕ ವಂಚನೆ ನಾಲ್ವರು ಆರೋಪಿಗಳ ಬಂಧನ – 15 ದಿನ ನ್ಯಾಯಾಂಗ ಬಂಧನ

ಪಡುಬಿದ್ರಿ: ಬ್ಯಾಂಕು ಮತ್ತು ಸೊಸೈಟಿಗಳಲ್ಲಿ 30 ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬೆಳಗಾವಿಯಲ್ಲಿ ಪಡುಬಿದ್ರೆ ಪೊಲೀಸರು ಬಂಧಿಸಿ ಪ್ರಮುಖ ಪ್ರಕರಣವೊಂದನ್ನು ಬೇಧಿಸಲಾಗಿದೆ.

ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಂಧಿತರನ್ನು ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42), ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ನಕಲಿ 916 ಹಾಲ್ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು3.5 ಲಕ್ಷ ರೂ. ಮೌಲ್ಯದ ಮೆಷಿನ್, ಕಂಪ್ಯೂಟರ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 30 ಗ್ರಾಂ ಗೋಲ್ಡ್ನ ಚಿನ್ನಾಭರಣಗಳನ್ನು ಸ್ಥಳೀಯವಾಗಿ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಪಡುಬಿದ್ರಿ ಕಂಚಿನಡ್ಕ ನಿವಾಸಿ, ಕೇರಳ ಮೂಲದ ಆರೋಪಿ ರಾಜೀವ್ ನೀಡಿರುವ ಮಾಹಿತಿಯಂತೆ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜೀವ್ 30 ಗ್ರಾಂ ಗೋಲ್ಡ್ ಬಳಸಿ ಗಲ್ಫ್ ರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ವಾಪಾಸಾಗುವ ವೇಳೆ ಶುದ್ಧ ಚಿನ್ನದಾಭರಣವನ್ನೇ ಹಾಕಿಕೊಂಡು ಬರುವ ತನ್ನ ಪ್ಲಾನ್ಗೆ ಸಹಕರಿಸಲು ಪ್ರಕರಣದ ಇತರ ಆರೋಪಿ ಗೆಳೆಯ ನಿತಿಲ್ ಭಾಸ್ಕರ್ ಶೇಟ್ ನನ್ನು ಬಳಸಿಕೊಂಡಿದ್ದ. ಕುಮುಟಾದ ಇನ್ನಿಬ್ಬರು ಆರೋಪಿಗಳಿಂದ ನಕಲಿ ಚಿನ್ನದ 40 ಬಳೆಗಳನ್ನು ತಯಾರಿಸಿಕೊಟ್ಟಿದ್ದರು. ಬೆಳಗಾವಿಯಲ್ಲಿ ನಕಲಿ ಹಾಲ್ಮಾರ್ಕ್ ಮೊಹರನ್ನು ಹಾಕಲಾಗಿತ್ತು. ಆದರೆ ಆರೋಪಿ ರಾಜೀವ್ ಸ್ಥಳೀಯವಾಗಿ ವಿತ್ತೀಯ ಸಂಸ್ಥೆಗಳಲ್ಲಿ ಅವುಗಳನ್ನು ಅಡವಿಟ್ಟು ವಂಚಿಸಿದ ಆರೋಪದಲ್ಲಿ ಈಗಾಗಲೇ ಪೊಲೀಸರ ಬಂಧಿಸಿದ್ದಾರೆ.

92 ಶೇ. ಚಿನ್ನಾಭರಣಗಳಂತೆಯೇ ಸಾಚಾ ಚಿನ್ನ ಇದೆಂದು ನಂಬಿದ ಬ್ಯಾಂಕು, ಸೊಸೈಟಿಗಳು ಚಿನ್ನಭರಣ ಈಡಿನ ಸಾಲವನ್ನಿತ್ತು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸಿ ಇದರಲ್ಲೂ ನಕಲಿ – ಅಸಲಿಗಳನ್ನು ಪತ್ತೆ ಮಾಡಲಾಗಿರಲಿಲ್ಲ. ಕೇವಲ ಉಡುಪಿಯ ಬಿಡ್ಡುದಾರರೊಬ್ಬರು ಇದನ್ನು ಕತ್ತರಿಸಿ ಪರಿಶೀಲಿಸಿದಾಗ ಆರೋಪಿ ರಾಜೀವ್ ಮತ್ತಾತನ ಪತ್ನಿಯ ಚಿನ್ನಾಭರಣ ಸಾಲದ ಇಡಿಯ ಪ್ರಕರಣವು ಹೊರಬಂದಿತ್ತು. ಪಡುಬಿದ್ರಿಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕ್ನ ಪಡುಬಿದ್ರಿ ಶಾಖೆಯಲ್ಲಿ 2022ರ ಸೆ. 1ರಿಂದ ಫೆ. 26, 2024ರವರೆಗೆ ಈ ದಂಪತಿ 180ಗ್ರಾಂ ನಕಲಿ ಚಿನ್ನವನ್ನಿಟ್ಟು 8.08ಲಕ್ಷಗಳನ್ನು ಪಡೆದುಕೊಂಡಿದೆ. ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಆರೋಪಿಗಳು ಇದೇ ಸುಮಾರು 2ವರ್ಷಗಳ ಅವಯಲ್ಲಿ 23 1ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023ರಿಂದ ಫೆ. 26, 2024ರ ಅವಧಿಯಲ್ಲಿ 72ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಗಳನ್ನು ರಾಜೀವ್ ದಂಪತಿ ಪಡೆದಿದ್ದರು
.

Latest Indian news

Popular Stories