ಉಡುಪಿ | ನಗರದಲ್ಲಿ ಅಪಾಯ ಆಹ್ವಾನಿಸುವ ಗುಂಡಿಗಳು..!! ಬಾವುಟದ ಕಂಬ ನೆಡಲು ತೋಡಿದ ಗುಂಡಿ ಮುಚ್ಚುವರಾರು…??

ಉಡುಪಿ, ಫೆ.3; ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಉಡುಪಿ ನಗರವನ್ನು ವಿದ್ಯುತ್ ದೀಪಾಲಂಕಾರ, ಕೇಸರಿ ಪತಾಕೆಗಳ ಮಾಲೆಯಿಂದ ಸಿಂಗರಿಸಲಾಗಿತ್ತು. ಅಲಂಕಾರಿಕ ವಸ್ತುಗಳ ಜೋಡಣೆಗೊಳಿಸಲು ನಗರದ ಪ್ರಮುಖ ರಸ್ತೆಗಳ ಎರಡೂ ಪಾರ್ಶ್ವಗಳಲ್ಲಿ ಅಡಿಕೆ ಮರದ ಕಂಬಗಳನ್ನು ಅಲಂಕಾರ ಕಾಮಗಾರಿ ಗುತ್ತಿಗೆ ಪಡೆದವರು ಅಳವಡಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಎಲ್ಲಾ ಕಂಬಗಳನ್ನು ತೆರವುಗೊಳಿಸಲಾಗಿದೆ. ಆದರೆ ಕಂಬ ಅಳವಡಿಸಲು ಅಗೆದಿರುವ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವ ಪರಿಣಾಮವಾಗಿ ನಗರದಲ್ಲಿ ಸಾರ್ವಜನಿಕರು ಅಪಾಯ ಎದುರಿಸಬೇಕಾಗಿದೆ.

ಈಗಾಗಲೇ ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಗುಂಡಿಗಳಲ್ಲಿ ಕಾಲುಸಿಲುಕಿ ಬಿದ್ದಿರುವ ಘಟನೆಗಳು ಬಹಳಷ್ಟು ನಡೆದಿವೆ. ಗಾಯಾಳಾಗಿರುವ ಪ್ರಕರಣಗಳು ಸಂಭವಿಸುವೆ. ಗುಂಡಿಗಳು ಹಾಗೆಯೇ ಬಿಟ್ಟಲ್ಲಿ ಪ್ರಾಣಾಪಾಯದಂತಹ ಘಟನೆಗಳು ಮುಂದುವರಿಯಲಿದೆ. ಅದಲ್ಲದೆ ಪಾದಚಾರಿ ರಸ್ತೆಯಲ್ಲಿಯೂ ಗುಂಡಿಗಳ ತೋಡಿಡಲಾಗಿದ್ದು ಇಂಟರ್ ಲಾಕ್ ನೆಲಹಾಸುಗಳು ಕಿತ್ತು ಹೋಗಿ ನಗರಸಭೆ ನಡೆಸಿರುವ ಕಾಮಗಾರಿಯು ಹಾಳಾಗಿದೆ. ಹಾಗೆ ಕಿನ್ನಿಮಲ್ಕಿ ಜಂಕ್ಷನ್ ಬಳಿ ಅಶ್ವತ್ಥ ಮರದ ಹತ್ತಿರಹೊಸದಾಗಿ ನಿರ್ಮಿಸಿದ ಕಕ್ರಿಟ್ ಚಪ್ಪಡಿ ಮುರಿದು ಅಪಾಯಕ್ಕೆ ಕಾರಣವಾಗಿದೆ ತಕ್ಷಣ ನಗರಸಭಾ ಅಧಿಕಾರಿಗಳು ಸೂಕ್ತಕ್ರಮ ಜರುಗಿಸಬೇಕಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ತೋಡಿರುವ ಗುಂಡಿಗಳನ್ನು ಮುಚ್ಚಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.

Latest Indian news

Popular Stories