ಉಡುಪಿ: ಗಾಂಜಾ ಸ್ವಾಧೀನ ಹೊಂದಿ ಮಾರಾಟ ಮಾಡುತ್ತಿದ್ದ ಆರೋಪಿಗೆ ಶಿಕ್ಷೆ.

ಉಡುಪಿ: ಗಾಂಜಾ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದ ಆರೋಪಿಗೆ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೇಶವ ಸನೀಲ್ (50) ಶಿಕ್ಷೆಗೊಳಗಾದ ಅಪರಾಧಿ.2016 ರಲ್ಲಿ ಆರೋಪಿಯು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದ. ಆರೋಪಿ ಧರಿಸಿದ್ದ ಬರ್ಮೋಡ ಚಡ್ಡಿಯಲ್ಲಿ 54 ಗ್ರಾಂ ತೂಕದ ಗಾಂಜ ಪತ್ತೆಯಾಗಿದ್ದಲ್ಲದೇ ಆತನ ಕಾರನ್ನು ಪರಿಶೀಲಿಸಿದಾಗ ಸದ್ರಿ ಕಾರಿನಲ್ಲಿ 1840 ಗ್ರಾಂ ಗಾಂಜಾ ಪತ್ತೆಯಾಗಿದ್ದು ಒಟ್ಟು 1894 ಗ್ರಾಂ ಗಾಂಜಾವನ್ನು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪರವರು ಆರೋಪಿತನು ತಪ್ಪಿತಸ್ಥ ಎಂದು ತಿರ್ಮಾನಿಸಿ ಆರೋಪಿಗೆ 1 ವರ್ಷ ಕಠಿಣ ಸಜೆ ಮತ್ತು 30,000/- ದಂಡ ವಿಧಿಸಿದೆ.

Latest Indian news

Popular Stories