ಉಡುಪಿ: ಅಡುಗೆ ಕೋಣೆಯ ಕಿಟಕಿ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು – 18 ಲಕ್ಷದ ಚಿನ್ನಾಭರಣ, 80 ಸಾವಿರ ನಗದು ಕಳವು

ಉಡುಪಿ: ಮನೆಯೊಂದರ ಅಡುಗೆ ಮನೆಯ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳರು 18 ಲಕ್ಷ ರೂಪಾಯಿಯ ಆಭರಣ, 80 ಸಾವಿರದ ನಗದು ಕದ್ದುಕೊಂಡು ಹೋಗಿದ್ದಾರೆ.

ಸುತಲ ಬಿ (62) ಅವರ ಮನೆಯಲ್ಲಿ ಕಳ್ಳತನ ವರದಿಯಾಗಿದ್ದು ರವಿವಾರ ರಾತ್ರಿ ಕೋಣೆಗೆ ಬಂದು ನೋಡಿದಾಗ ಯಾರೋ ಕಳ್ಳರು ಅಡುಗೆ ಕೋಣೆಯ ಮಧ್ಯದ ಕಿಟಕಿಯನ್ನು ಮುರಿದು ಮನೆಯ ಬಾವಿಯ ಬಳಿ ಇರುವ ಬಾಗಿಲು ತೆರೆದಿದ್ದಾರೆ.

ಮನೆಯ ಒಳಗೆ ಬಂದು ನೋಡಿದಾಗ ಟೀಪಾಯ್ ಮೇಲೆ ಇಟ್ಟಿದ್ದ ವಜ್ರದ ನೆಕ್ಲೆಸ್ ಅಂದಾಜು ಮೌಲ್ಯ 8 ಲಕ್ಷ, ವಜ್ರದ 2 ಬಳೆಗಳು ಅಂದಾಜು ಮೌಲ್ಯ 8 ಲಕ್ಷ  ಮತ್ತು 2 ಜೊತೆ ವಜ್ರದ ಬೆಂಡೋಲೆಗಳು ಇದರ ಅಂದಾಜು ಮೌಲ್ಯ  2ಲಕ್ಷ ಹಾಗೂ ನಗದು 80,000/-ರೂಗಳನ್ನು ಕದ್ದೊಯ್ದಿದ್ದಾರೆ. 

ಕಳವು ಆದ ವಸ್ತುಗಳ  ಅಂದಾಜು ಮೌಲ್ಯ 18,80,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2024 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories