ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿ; ರೈತರ ಬ್ಯಾಂಕ್ ಖಾತೆಗೆ ಕಂತಿನ ಹಣ ಜಮೆ

ಬೀದರ ಜೂನ್ 14 (ಕರ್ನಾಟಕ ವಾರ್ತೆ):-ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದ ಎಂಟನೇ ಕಂತಿನ ಅನುದಾನ 35.70 ಕೋಟಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ, ಇದರಿಂದ 1,78,544 ರೈತರಿಗೆ ಬಿತ್ತನೆ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ತ್ರೆöÊಮಾಸಿಕ ನೋಂದಣಿಯ ಪ್ರಕಾರ ಕೇಂದ್ರದ ಅನುದಾನ ಒಟ್ಟು ಇಲ್ಲಿಯವರೆಗೆ 231 ಕೋಟಿಗಳು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವರ: ಮೊದಲನೇ ಕಂತು 1,91,113 ರೈತರಿಗೆ 38.22 ಕೋಟಿ, ಎರಡನೇ ಕಂತು 1,85,729 ರೈತರಿಗೆ 37.15 ಕೋಟಿ, ಮೂರನೇ ಕಂತು 1,75,470 ರೈತರಿಗೆ 35.09 ಕೋಟಿ, ನಾಲ್ಕನೇ ಕಂತು 1,68,410 ರೈತರಿಗೆ 33.68 ಕೋಟಿ, ಐದನೇ ಕಂತು 1,60,598 ರೈತರಿಗೆ 32.12 ಕೋಟಿ, ಆರನೇ ಕಂತು 1,49,297 ರೈತರಿಗೆ 29.85 ಕೋಟಿ, ಏಳನೇ ಕಂತು 1,29,879 ರೈತರಿಗೆ 24.18 ಕೋಟಿ, ಎಂಟನೇ ಕಂತು 3609 ರೈತರಿಗೆ 0.73 ಕೋಟಿಗಳಂತೆ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿರುತ್ತಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!