ನಿಮ್ಮನ್ನು ಪ್ರಧಾನಿ ಮಾಡಿದ್ದು ನಾವೇ… ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಡಿ: ರೈತ ಮುಖಂಡ ಕಿಡಿ

ನವದೆಹಲಿ: ಎಂಎಸ್‌ಪಿ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಅವರು ರೈತರೇ ಮೋದಿಯನ್ನು ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು, ನಮ್ಮ ಮೇಲೆ ದಬ್ಬಾಳಿಕೆ ನಡೆಸಬೇಡಿ, ಬಿಜೆಪಿ ನೇತೃತ್ವದ ಕೇಂದ್ರವನ್ನು ದೇಶ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಬೃಹತ್ ಪ್ರತಿಭಟನೆಯನ್ನು ಸಂಯೋಜಿಸುತ್ತಿರುವ ಪಂಧೇರ್, ತಮ್ಮ ಮೆರವಣಿಗೆಯನ್ನು ತಡೆಯಲು ಹರಿಯಾಣದ ಹಳ್ಳಿಗಳಲ್ಲಿ ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಇಂತಹ ಸರ್ಕಾರವನ್ನು ದೇಶ ಕ್ಷಮಿಸುವುದಿಲ್ಲ…ಹರಿಯಾಣದ ಹಳ್ಳಿಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಿ ನಮ್ಮ ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದ ಅವರು. ನಾವೇನು ಅಪರಾಧ ಮಾಡಿದ್ದೇವೆ? ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದ್ದು ನಾವೇ ಈಗ ನಮ್ಮ ಮೇಲೆ ಸೇನಾ ಪಡೆಗಳನ್ನು ಕಳುಹಿಸಿ ದಬ್ಬಾಳಿಕೆ ಮಾಡುತಿದ್ದೀರಿ ಎಂದು ನಾವು ಅಂದುಕೊಂಡಿರಲಿಲ್ಲ. ನಾವು ಶಾಂತ ರೀತಿಯಲ್ಲಿ ದೆಹಲಿಯತ್ತ ತೆರಳಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ನಾವು ಮಾಡಲು ನಿಂತಿದ್ದೇವೆ ಅದನ್ನು ನೀವು ತಡೆಯಲು ಯತ್ನಿಸುತ್ತಿದ್ದೀರಿ ಎಂದು ಕಿಡಿಕಾರಿದರು.
ಕೇಂದ್ರ ನಡೆಸಿದ ಹಲವು ಸಭೆಗಳಲ್ಲಿ ನಾವು ಭಾಗವಹಿಸಿದ್ದೇವೆ, ಪ್ರತಿಯೊಂದು ಅಂಶವನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಇದರ ಬಗ್ಗೆ ಈಗ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಾವು ಶಾಂತರಾಗಿರುತ್ತೇವೆ, ಪ್ರಧಾನಿ ಮುಂದೆ ಬಂದು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. 1.5-2 ಲಕ್ಷ ಕೋಟಿ ದೊಡ್ಡ ಮೊತ್ತವಲ್ಲ… ಈ ಅಡೆತಡೆಗಳನ್ನು ತೆಗೆದು ದೆಹಲಿಯತ್ತ ಸಾಗಲು ಅವಕಾಶ ನೀಡಬೇಕು… ಎಂದು ಹೇಳಿದರು.

ನಿನ್ನೆ, ಪಂಜಾಬ್-ಹರಿಯಾಣ ಶಂಭು ಗಡಿಯಿಂದ ರೈತರು ತಮ್ಮ ‘ದೆಹಲಿ ಚಲೋ’ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಸಂಧು ಘೋಷಿಸಿದರು. ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ ಗಂಟೆಗಳ ನಂತರ ಅವರು ಈ ಹೇಳಿಕೆಯನ್ನು ನೀಡಿದರು.

ಈಗಾಗಲೇ ಶಂಭು ಗಡಿಯಲ್ಲಿ 1,170 ಟ್ರ್ಯಾಕ್ಟರ್‌ಗಳು, ಖನೌರಿುಲ್ಲಿ 870 ಟ್ರ್ಯಾಕ್ಟರ್‌ಗಳನ್ನು ನಿಯೋಜಿಸಲಾಗಿದೆ.

Latest Indian news

Popular Stories