ಅನುಗ್ರಹ ಮಹಿಳಾ ಕಾಲೇಜಿನಲ್ಲಿ ವಿಜೃಂಭಣೆಯ ದ್ವಿ-ದಶಮಾನೋತ್ಸವ ಕಾರ್ಯಕ್ರಮದೊಂದಿಗೆ, ಸಂಭ್ರಮದ ವಾರ್ಷಿಕೋತ್ಸವ

ಬಂಟ್ವಾಳ, ಜ. 3: ಇಲ್ಲಿನ ಕಲ್ಲಡ್ಕ ಸಮೀಪದ ಗೋಲ್ತಮಜಲು ಎಂಬಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾಗಿರುವ ಅನುಗ್ರಹ ಮಹಿಳಾ ಕಾಲೇಜು ತನ್ನ ದ್ವಿದಶಮಾನಕ್ಕೆ ಕಾಲಿರಿಸಿದ ಸಂಭ್ರಮದೊಂದಿಗೆ,ಇದರ ಹನ್ನೆರಡನೇ ವಾರ್ಷಿಕೋತ್ಸವವನ್ನು ಬಹಳ ಸಡಗರದಿಂದ ಇತ್ತೀಚೆಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿಗೆ ಹೊಸದಾಗಿ ನಿರ್ಮಿಸಲಾದ ಎರಡನೇ ಅಂತಸ್ತಿನಲ್ಲಿ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯಗಳು ಮತ್ತು ಸಭಾಭವನದ ಉದ್ಘಾಟನಾ ಕಾರ್ಯಕ್ರಮಗಳು ಕೂಡಾ ಜರುಗಿದವು.

IMG 20230103 WA0041 Dakshina Kannada
IMG 20230103 WA0043 Dakshina Kannada


ಅನುಗ್ರಹ ಮಹಿಳಾ ವಿದ್ಯಾ ಸಂಸ್ಥೆಯ 2018-19ರಿಂದ 2021-22ರವರೆಗಿನ ಶೈಕ್ಷಣಿಕ ವರ್ಷಗಳ ವಿದ್ಯಾರ್ಥಿನಿಯರ ಪದವಿ ಪ್ರದಾನ ಕಾರ್ಯಕ್ರಮವನ್ನೂ ಕೂಡ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಹಿನ್ ಶಿಕ್ಷಣ ಸಂಸ್ಥೆ ಬೀದರ್ ಇದರ ಅಧ್ಯಕ್ಷರಾದ ಶ್ರೀಯುತ ಡಾ. ಅಬ್ದುಲ್ ಖದೀರ್ ರವರು ‘ಪ್ರತಿಯೊಬ್ಬರೂ ಶಿಕ್ಷಣವನ್ನು ಹೊಂದುವುದರ ಜೊತೆಗೆ ಮಾನವೀಯ ಗುಣವನ್ನು ಬೆಳೆಸಬೇಕೆಂಬ ಹಿತವಚನವನ್ನು ನೀಡಿದ ಅವರು,ಅನುಗ್ರಹ ಮಹಿಳಾ ಕಾಲೇಜು ಒಂದು ಉತ್ತಮ ಶಿಕ್ಷಣ ಸಂಸ್ಥೆಯಾಗಿ ಪ್ರಜ್ವಲಿಸಲೆಂದು ಶುಭ ಹಾರೈಸಿದರು.


ಅಲ್ ಹಬೀಬ್ ಎಜುಕೇಶನ್ ಸೊಸೈಟಿ, ಶಿವಮೊಗ್ಗ ಇದರ ಆಡಳಿತ ನಿರ್ದೇಶಕರಾದ ಇಂಜಿನಿಯರ್, ಮುಹಮ್ಮದ್ ಇಬ್ರಾಹೀಂ ರವರು ಎಲ್ಲರೂ ಪ್ರೀತಿ, ವಿಶ್ವಾಸ, ಬಾಂಧವ್ಯದೊಂದಿಗೆ ಬೆರೆತಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಬಹುದೆಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.


ಕಲ್ಲೂರು ಎಜುಕೇಶನ್ ಟ್ರಸ್ಟ್ ಮತ್ತು ಕಲ್ಲೂರು ಡೆವಲಪರ್ಸ್ ಕಾರವಾರ, ಇದರ ಅಧ್ಯಕ್ಷರಾದ ಪಿ.ಎಂ.ಜೆ.ಎಫ್, ಲಯನ್, ಡಾ. ಇಬ್ರಾಹಿಂ ಹಾಜಿ ಕಲ್ಲೂರ್ ರವರು, ವಿಧ್ಯಾರ್ಥಿಗಳು ಶಿಕ್ಷಣ ಪಡೆಯುವುದರೊಂದಿಗೆ ಗುರುವರ್ಯರಿಗೂ ಗೌರವ ನೀಡಿದಾಗ ಮಾತ್ರ ಪಡೆದ ಶಿಕ್ಷಣಕ್ಕೆ ಮಹತ್ವವಿರಲು ಸಾಧ್ಯವೆಂದು ಮತ್ತು ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆದು ರಾಷ್ಟ್ರೀಯ ಶಕ್ತಿಯಾಗಬೇಕೆಂದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.


ಅಬುಧಾಬಿಯ ಖಲೀಫ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕರಾದ ವಿಜ್ಞಾನಿ
ಡಾ. ಎ. ಆರ್. ಬೇಗ್ ರವರು ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆದರೆ ಉತ್ತಮ ಕುಟುಂಬ ನಿರ್ಮಾಣ ಸಾಧ್ಯವೆಂದು ಹೇಳಿದ ಅವರು ಅನುಗ್ರಹ ಕಾಲೇಜು ಮುಂದೊಂದು ದಿನ ವಿಶ್ವ ವಿದ್ಯಾನಿಲಯವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಶಾಂತಿ ಪ್ರಕಾಶನದ ಉಪಾಧ್ಯಕ್ಷರಾದ ಶ್ರೀಯುತ ಕೆ. ಎಂ ಷರೀಫ್ ರವರು ಭವಿಷ್ಯದಲ್ಲಿ ವಿದ್ಯಾರ್ಥಿನಿಯರು ಯಾರೊಬ್ಬರ ಅಧೀನಕ್ಕೆ ಒಳಪಡದೆ ಗರುಡನಂತೆ ಉನ್ನತ ಮಟ್ಟದಲ್ಲಿ ಹಾರಾಡಲಿ ಎಂದು ಆಶಿಸಿದರು.
ಅನುಪಮ ಮಹಿಳಾ ಮಾಸಿಕದ ಸಂಪಾದಕಿಯಾದ ಶ್ರೀಮತಿ ಶಹನಾಝ್ ಎಂ. ರವರು ಸ್ವತಂತ್ರವಾಗಿ ಬದುಕಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಬೆಳವಣೆಗೆಯ ಬಗ್ಗೆ ಪ್ರಶಂಸಿದರು.


ಕಾಲೇಜಿನ ಮಾಜಿ ಪ್ರಾಂಶುಪಾಲೆ ಶ್ರೀಮತಿ ಗೀತಾ ಜಿ. ಭಟ್ ರವರು ಶಿಸ್ತು, ಸಂಯಮ, ಸಂಸ್ಕಾರ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಲು ಕಾರಣಕರ್ತವಾಗುತ್ತೆಂದು ವಿದ್ಯಾರ್ಥಿನಿಯರಿಗೆ ಕಿವಿಮಾತುಗಳನ್ನಾಡಿದರು.


ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತಾ ಬಿ.ಡಿ. ಇವರು 2022-23ನೇ ಸಾಲಿನ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸೀನ್ ಬೇಗ್ ರವರು ಅಧ್ಯಕ್ಷೀಯ ಮಾತುಗಳನ್ನಾಡಿ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ಸರ್ವಸದಸ್ಯರ ಅಪಾರ ಸೇವೆಯನ್ನು ಸ್ಮರಿಸಿದರು.


ವೇದಿಕೆಯಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಶಾಹುಲ್ ಹಮೀದ್, ಜೊತೆ ಕಾರ್ಯದಶಿಯಾದ ಸುಲೈಮಾನ್ ಅಪೋಲೋ, ಖಜಾಂಚಿ ಶ್ರೀಯುತ ಹೈದರ್ ಅಲಿ, ಸದಸ್ಯರುಗಳಾದ ಶ್ರೀಯುತ ಅಬ್ದುಲ್ಲ ಕುಂಞ, ಶ್ರೀಯುತ ಅಬ್ದುಲ್ಲ ಚೆಂಡಾಡಿ, ಶ್ರೀಯುತ ಇಬ್ರಾಹಿಂ ಚೆಂಡಾಡಿ, ಶ್ರೀಯುತ ಮುಖ್ತಾರ್ ಅಹಮ್ಮದ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸರ್ವಸದಸ್ಯರು, ಬೋಧಕ ಹಾಗೂ ಬೋಧಕೇತರ ವೃಂದ, ವಿದ್ಯಾರ್ಥಿನಿಯರು, ಹಳೆವಿದ್ಯಾರ್ಥಿಗಳು ಪೋಷಕರು ಸಕ್ರೀಯವಾಗಿ ಪಾಲ್ಗೊಂಡಿದ್ದರು ಮತ್ತು ಅಪರಾಹ್ನ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕು. ಕಾರ್ಯಕ್ರಮದ ಆರಂಭದಲ್ಲಿ ಹಾಮಿದಾ ವಫಾ ಕಿರಾಅತ್ ಪಠಿಸಿದರು ಹಾಗೂ ಕಾಲೇಜಿನ ಸಂಚಾಲಕರಾದ ಅಮಾನುಲ್ಲಾ ಖಾನ್ ರವರು ಸ್ವಾಗತಿಸಿದರು. ಕೊನೆಯಲ್ಲಿ ಇತಿಹಾಸ ಉಪನ್ಯಾಸಕಿ ಡಾ. ರಂಜಿತಾ ಎಂ. ಧನ್ಯವಾದವಿತ್ತರು, ಕು ಫಾತಿಮತ್ ಶೈಮ ಹಾಗೂ ಹಾಜಿರಾ ತಪ್ಸೀರರವರು ಸಭಾ ಕಾರ್ಯಕ್ರಮವನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕು. ನಫೀಸತ್ ಅಫ್ನ ಮತ್ತು ಕು. ಜಝೀಲರವರು ನಿರೂಪಿಸಿದರು.

Latest Indian news

Popular Stories