ಬೆಂಗ್ರೆ: 19 ಫೆಬ್ರವರಿ 2023, ಭಾನುವಾರ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಬೆಂಗರೆ ಘಟಕ ಹಾಗೂ ಕಸಬಾ ಗ್ರಾಜುಯೆಟ್ಸ್ ಫಾರಮ್ ಇದರ ಜಂಟಿ ಆಶ್ರಯದಲ್ಲಿ ತರಬೇತಿ ಮತ್ತು ಪ್ರೇರಣೆ ಕಾರ್ಯಕ್ರಮವನ್ನು ಹಮ್ಮಿಗೊಂಡಿತು.
ಕಾರ್ಯಕ್ರಮದ ಮೊದಲ ಅಧಿವೇಶನದಲ್ಲಿ ಡಾ. ಮಿಸ್ಹಬ್ ಇಸ್ಮಾಯಿಲ್ ಕೆ ಪಿ ಮಕ್ಕಳಿಗೆ ಉತ್ತೇಜನಗೊಳಿಸುವ ಮಾತುಗಳನ್ನಾಡಿದರು. ಅದನ್ನಾನುಸರಿಸಿ, ಕಸಬಾ ಗ್ರಾಜುಯೇಟ್ಸ್ ಫಾರಮ್ ಇದರ ಸದಸ್ಯರಾದ ತೈಯುಬ್ ಅವರು ಮಕ್ಕಳನ್ನುದ್ದೇಷಿಸಿ ಮಾತುಗಳನ್ನು ಆಡಿದರು. ತದನಂತರ, ಎಸ್.ಐ.ಒ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದಂತಹ ಆಸಿಫ್ ಡಿ.ಕೆ ಅವರು ಮಾತನಾಡಿದರು.
ಅದೇ ರೀತಿ, ಎರಡನೇ ಅಧಿವೇಶನದಲ್ಲಿ `ಪರೀಕ್ಷೆಯನ್ನು ಹೇಗೆ ಎದುರಿಸುವುದು?´ ಎನ್ನುವ ವಿಷಯದಲ್ಲಿ ಪಿ.ಎ. ಕಾಲೇಜು ಇದರ ಪ್ರಾಂಶುಪಾಲರಾದ ಡಾ| ಸರ್ಫರಾಜ್ ಜೆ ಹಾಸಿಮ್ ಇವರು ಮಾತುಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಿನಾನ್ ನಿರ್ವಹಿಸಿದರು. ಧನ್ಯವಾದ ಅರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಪಿ.ಜಿ.ರಫೀಕ್, ಅಬ್ದುಲ್ ರಾಫಿ ,ಹಫ್ಫಾನ್ ಹಾಗೂ ಸಿನಾಫ್ ಉಪಸ್ಥಿತರಿದ್ದರು.