ಮಂಗಳೂರು, ಜನವರಿ 31: ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸೋನವಾನೆ ಋಷಿಕೇಶ್ ಭಗವಾನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಜನವರಿ 31 ಮಂಗಳವಾರದಂದು ಖಾಲಿ ಇರುವ ಗುಪ್ತಚರ ಎಸ್‌ಪಿ ಹುದ್ದೆಗೆ ಮುಂದಿನ ಆದೇಶದವರೆಗೆ ನಿಯೋಜನೆ ಮಾಡಿದೆ.
ಸೋನಾವಾನೆ ರಿಷಿಕೇಶ್ ಭಗವಾನ್ ಅವರ ಸ್ಥಾನವನ್ನು ಗುಪ್ತಚರ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಮತೆ ವಿಕ್ರಮ್ ಅವರು ವಹಿಸಿಕೊಳ್ಳಲಿದ್ದಾರೆ.