ಬೆಳ್ತಂಗಡಿ: ತಾಯಿ-ಮಗು ನಾಪತ್ತೆ

ಬೆಳ್ತಂಗಡಿ, ಜೂ.24: ಗುರುವಾಯನಕೆರೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ನಾಲ್ಕು ವರ್ಷದ ಮಗನೊಂದಿಗೆ ವಾಸವಾಗಿದ್ದ ವಿವಾಹಿತ ಮಹಿಳೆಯೊಬ್ಬರು ಜೂ.6ರಿಂದ ನಾಪತ್ತೆಯಾಗಿದ್ದಾರೆ.

ಕಡಬ ತಾಲೂಕಿನ ಬೆಳ್ಳಂದೂರು ಗ್ರಾಮದ ನಿವಾಸಿ ನವೀನ್ ಕೆ.ಆರ್ ಅವರ ಪತ್ನಿ ಕವನ(25) ಜೂ.6ರಂದು ರಾತ್ರಿ ಊಟ ಮುಗಿಸಿ ಮಲಗಿದ್ದರು. ಆದರೆ, ಬೆಳಗ್ಗೆ ಪತಿ ಎದ್ದು ನೋಡಿದಾಗ ನಾಲ್ಕು ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಳು.

2022ರಲ್ಲಿಯೂ ಕವನಾ ನಾಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರು ಆಕೆಯನ್ನು ಸಂಬಂಧಿಕರ ಮನೆಯಲ್ಲಿ ಪತ್ತೆ ಹಚ್ಚಿದ್ದರು. ಈಗ ಮತ್ತೆ ನಾಪತ್ತೆಯಾಗಿದ್ದಾಳೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories