ಬೆಳ್ತಂಗಡಿ: ಮೂರು ಲಕ್ಷಕ್ಕೂ ಅಧಿಕಮೌಲ್ಯದ ಬ್ಯಾಟರಿ ಕಳವು ಮಾಡಿದ್ದ ನಾಲ್ವರ ಬಂಧನ

ಬೆಳ್ತಂಗಡಿ, ಮೇ 3:  ಕೊಕ್ಕಡ ಗ್ರಾಮದ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಕಳವು ಮಾಡಿದ್ದ 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಬ್ಯಾಟರಿ ಹಾಗೂ ಇತರೆ ವಸ್ತುಗಳನ್ನು ಪತ್ತೆ ಹಚ್ಚಿ ಧರ್ಮಸ್ಥಳ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಟ್ರಪಾಡಿ ನಿವಾಸಿ ರಕ್ಷಿತ್ ಡಿ (24), ಕಡಬ ಮೀನಾಡಿ ನಿವಾಸಿ ತೀರ್ಥೇಶ್ ಎಂ (29), ಕಡಬ ಉರುಂಬಿ ನಿವಾಸಿ ಯಜ್ಞೇಶ್ ಯು ಕೆ (30), ರೋಹಿತ್ ಎಚ್ ಶೆಟ್ಟಿ (23) ಎಂದು ಗುರುತಿಸಲಾಗಿದೆ.

ಪ್ರಭಾರ ಮುಖ್ಯೋಪಾಧ್ಯಾಯ ಹಳ್ಳಿಕೇರಿ ಪ್ರಭಾಕರ ನಾಯಕ್ ಅವರು ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನನ್ವಯ ಕೊಕ್ಕಡ ಸರಕಾರಿ ಶಾಲೆಯಲ್ಲಿ ಪಾಳು ಬಿದ್ದಿದ್ದ 3.2 ಲಕ್ಷ ಮೌಲ್ಯದ ಎಂಟು ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ರೇಣುಕಾ ಅವರನ್ನೊಳಗೊಂಡ ಪೊಲೀಸ್ ತಂಡ ಮಹತ್ವದ ಸುಳಿವಿಗಾಗಿ ಹುಡುಕಾಟ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಉಪ್ಪಿನಂಗಡಿ ಪೊಲೀಸ್ ವ್ಯಾಪ್ತಿಯ ನಾಲ್ಕು ಸರ್ಕಾರಿ ಶಾಲೆಗಳು, ಸುಬ್ರಹ್ಮಣ್ಯ ವ್ಯಾಪ್ತಿಯ ಎರಡು ಸರ್ಕಾರಿ ಶಾಲೆಗಳು, ಪುತ್ತೂರು ಪೇಟೆ, ಬಂಟ್ವಾಳ ಮತ್ತು ಧರ್ಮಸ್ಥಳ ಪೊಲೀಸ್ ವ್ಯಾಪ್ತಿಯ ತಲಾ ಒಂದು ಸರ್ಕಾರಿ ಶಾಲೆಗಳಲ್ಲಿ ಬ್ಯಾಟರಿಗಳನ್ನು ಕಳವು ಮಾಡಿದ್ದರು. ಪೊಲೀಸರು ಒಂಬತ್ತು ಸರ್ಕಾರಿ ಶಾಲೆಗಳಿಂದ 2 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಉದ್ದೇಶಕ್ಕಾಗಿ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Latest Indian news

Popular Stories