ಮಂಗಳೂರು: ಯುವ ಹೊಸ ಮತದಾರರು ಕರ್ನಾಟಕದ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ. ಯುವ ಮತದಾರರು ನಿಮ್ಮ ಭವಿಷ್ಯ ಉಜ್ವಲವಾಗಿರಬೇಕಾದರೇ ಬಿಜೆಪಿಗೆ ಮತ ನೀಡಿ. ಕಾಂಗ್ರೆಸ್ನಿಂದ ಇದು ಸಾಧ್ಯವಾಗುವುದಿಲ್ಲ ಎಂದು ಮೋದಿ ಮುಲ್ಕಿಯಲ್ಲಿ ನಡೆಯುತ್ತಿರುವ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅಶಾಂತಿಯನ್ನು ಹುಟ್ಟು ಹಾಕುತ್ತದೆ. ಹಾಗೇ ಅಭಿವೃದ್ಧಿ ವಿರುದ್ಧವಾಗಿದೆ. ಕಾಂಗ್ರೆಸ್ ಆತಂಕವಾದಿಗಳನ್ನು ರಕ್ಷಿಸುತ್ತದೆ. ತುಷ್ಟೀಕರಣ ನೀತಿ ಅನುಸರಿಸುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆ? ರಾಜ್ಯವನ್ನು ಬರಬಾದ್ ಮಾಡಬೇಕೆ? ಹಾಗಿದ್ದರೇ ಕಾಂಗ್ರೆಸ್ಗೆ ಮತ ನೀಡಬೇಡಿ ಎಂದರು.