ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ನಡೆಸಿದ ನಿರಂತರ ಹಲ್ಲೆ, ಕೊಲೆ, ಕೊಲೆಯತ್ನ ವಿಚಾರದಲ್ಲಿ ಪೊಲೀಸ್ ಇಲಾಖೆ ಗಾಢ ಮೌನವಹಿಸಿರುವ ನಡೆಯನ್ನು ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳು ಮಸೂದ್, ಫಾಝಿಲ್ ಮತ್ತು ಜಲೀಲ್ ಎಂಬವರನ್ನು ಹತ್ಯೆ ನಡೆಸಿದ್ದಾರೆ. ಅಲ್ಲದೇ ಸುಮಾರು 15ಕ್ಕೂ ಅಧಿಕ ಜನರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ಸಂದರ್ಭದಲ್ಲಿ ಕಠಿಣ ಕಾಯ್ದೆ ಅಡಿಯಲ್ಲಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕಾಗಿದ್ದ ಪೊಲೀಸ್ ಇಲಾಖೆ ಕಾಟಾಚಾರಕ್ಕೆ ಐಪಿಸಿ ಕಾಯ್ದೆಯ ಲಘು ಸೆಕ್ಷನ್ ಅಡಿಯಲ್ಲಿ ಕೇಸ್ ಹಾಕಿ ಕೈತೊಳೆದುಕೊಂಡಿದೆ. ಇದರಿಂದಾಗಿಯೇ ಸಂಘಪರಿವಾರಕ್ಕೆ ಮತ್ತಷ್ಟೂ ಕ್ರಿಮಿನಲ್ ಚಟುವಟಿಕೆ ನಡೆಸಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಇದರ ಮುಂದುವರಿದ ಭಾಗವಾಗಿಯೇ ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರಿಂದ ಕೊಲೆಯಾದ ಫಾಝಿಲ್’ನ ಸಹೋದರನ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದರು.
ಈ ಮಧ್ಯೆ ಜಿಲ್ಲೆಯ ನಡೆಯುವ ಕೊಲೆ, ಹಲ್ಲೆಗಳನ್ನು ಸಮರ್ಥಿಸಿಕೊಂಡು ಶರಣ್ ಪಂಪ್ವೆಲ್ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡಿದ್ದು, ಈ ಎಲ್ಲಾ ಕ್ರತ್ಯಗಳಲ್ಲಿ ಈತನ ಕೈವಾಡ ಬಹಿರಂಗವಾಗಿದೆ. ಆದರೂ ಈತನ ವಿರುದ್ಧ ಯಾವುದೇ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗದಿರುವುದು ವಿಪರ್ಯಾಸ ಎಂದರು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆದ ಕೊಲೆ, ಕೊಲೆಯತ್ನ ಮತ್ತು ಹಲ್ಲೆ ಪ್ರಕರಣವನ್ನು ಪೊಲೀಸ್ ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಕುಕೃತ್ಯದ ಹಿಂದಿರುವ ಕಾಣದ ಕೈಗಳ ಕೈವಾಡವನ್ನು ಬಯಲಿಗೆಳೆದು ಕಾನೂನಿನ ಕುಣಿಕೆಗೆ ಒಪ್ಪಿಸಬೇಕೆಂದು ರಿಯಾಜ್ ಫರಂಗಿಪೇಟೆ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ
https://www.facebook.com/100089664502075/posts/119440724388077/?mibextid=Nif5oz